ವಿದ್ಯಾರ್ಜನೆ ಮಾಡುವವರಲ್ಲಿ ದೈಹಿಕ, ಮಾನಸಿಕ ಸಾಮಥ್ರ್ಯ ಅಗಾಧವಾಗಿರಬೇಕು
ರಾಮದುರ್ಗ : ಕೋವಿಡ್ನ ಈ ಸಂದಿಗ್ದ ಸಮಯದಲ್ಲಿ ಮನೆಯಲ್ಲಿಯೇ ಕುಳಿತು ಶಾಲೆಯಲ್ಲಿ ಕಲಿಯಬೇಕಾಗಿದ್ದನ್ನು ಕಲಿಯುವುದು ಅನಿವಾರ್ಯವಾಗಿದೆ, ಶಾಲೆ ಮತ್ತು ಮನೆ ಬೇರೆ ಬೇರೆ ಅಲ್ಲ ಹೀಗಾಗಿ ಆನಲೈನ್ ಪಾಠಗಳ ಮೂಲಕ ಮಕ್ಕಳ ಕಲಿಕೆ ಸಾಗಬೇಕಾಗಿದೆ, ಸಂಕಷ್ಟದಲ್ಲೂ ಕೆಲವು ಒಳ್ಳೆಯದಿರುತ್ತವೆ ಅದನ್ನೇ ಗುರುತಿಸಿ ಕಲಿಯಬೇಕು, ವಿದ್ಯಾರ್ಜನೆ ಮಾಡುವವರಲ್ಲಿ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯ ಅಗಾದವಾಗಿರಬೇಕು, ಜ್ಞಾನಶಕ್ತಿ, ಇಚ್ಚಾಶಕ್ತಿ ಮತ್ತು ಕಾರ್ಯಶಕ್ತಿ ಇವುಗಳನ್ನು ಮಕ್ಕಳು ಮೈಗೂಡಿಸಿಕೊಳ್ಳಬೇಕು, ಕಲಿಕೆಯ ಆಸಕ್ತಿ, ಹೊಸದನ್ನು ತಿಳಿಯುವ ಬಯಕೆ, ಏಕಾಗ್ರತೆ, ಶಮ(ಮನೋನಿಗ್ರಹ), ದಮ(ಇಂದ್ರೀಯನಿಗ್ರಹ), ಸತತ ಅಧ್ಯಯನ ಇವು ಆದರ್ಶ ವಿದ್ಯಾಥಿಗಳ ಲಕ್ಷಣಗಳಾಗಿವೆ ಎಂದು ಉತ್ತರಾಖಂಡ ರಾಜ್ಯದ ಹರಿದ್ವಾರದ ಆರ್.ಕೆ.ಎಂ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ದಯಾದೀಪಾನಂದ ಗುರೂಜಿಯವರು ತಿಳಿಸಿದರು.ಅವರು ಚಂದರಗಿಯ ಎಸ್ ಎಂ ಕಲೂತಿ ಮಹಾವಿದ್ಯಾಲಯದ ವಿದ್ಯಾಥರ್ಿಗಳು, ಪಾಲಕರು, ಶಿಕ್ಷಕರು ಹಾಗೂ ಆಡಳಿತಮಂಡಳಿಯವರನ್ನು ಉದ್ದೇಶಿಸಿ ವೆಬಿನಾರ್(ಆನ್ಲೈನ್) ಮೂಲಕ ಮಾತನಾಡುತ್ತಾ ಚಾರಿತ್ರ್ಯ ನಿಮರ್ಾಣ ಮಾಡುವ ಹಾಗೂ ನಮ್ಮ ಸಾಮಥ್ರ್ಯದ ಮೇಲೆ ನಾವು ಬದುಕನ್ನು ಕಟ್ಟಿಕೊಳ್ಳುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದ ಅವರು ಪರಿಶುದ್ದ ಆಧ್ಯಾತ್ಮಿಕತೆ ಇದ್ದಲ್ಲಿ ನೈತಿಕತೆ ಇದ್ದೇ ಇರುತ್ತದೆ ಎಂದರು.
ಹಾಗೂ ಪ್ರಾಮಾಣಿಕತೆಯಲ್ಲಿ ಭಗವಂತನಿರುತ್ತಾನೆ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು. ಕರೋಣದ ಈ ಸಂಕಷ್ಟದ ಸಮಯದಲ್ಲಿ ಮನಸ್ಸಿನಿಂದ ದುಗುಡ, ದುಖ:, ದುಮ್ಮಾನ ಇವುಗಳನ್ನು ದೂರವಿಟ್ಟು ಉತ್ತಮ ವಿಚಾರಗಳನ್ನು ಮತ್ತು ಆಲೋಚನೆಗಳನ್ನು ಮನದಲ್ಲಿ ಸ್ಥಿರಗೊಳಿಸಿಕೊಳ್ಳಬೇಕು ಆಗ ಮಾತ್ರ ನಾವು ಪ್ರಸ್ತುತ ಇರುವ ಕಷ್ಟದ ಸನ್ನಿವೇಶವನ್ನು ಸುಲಭವಾಗಿ ಜಯಿಸಬಹುದು ಎಂದು ಪಾಲಕರಿಗೆ ಕರೆ ನೀಡಿದರು, ಶುದ್ಧವಾದ ಶರೀರದಲ್ಲಿ ಪವಿತ್ರವಾದ ಮನಸ್ಸು ಇದ್ದರೆ ವಿದ್ಯೆ ಸ್ಥಿರಗೊಳ್ಳುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಎಸ್ ಎಮ್ ಕಲೂತಿಯವರು ಹಾಗೂ ಆಡಳಿತ ಮಂಡಳಿಯ ನಿದರ್ೇಶಕರು, ವಿದ್ಯಾಥರ್ಿಗಳು, ಪಾಲಕರು, ಪ್ರಾಚಾರ್ಯರು, ಶಿಕ್ಷಕರು ಉಪಸ್ಥಿತರಿದ್ದರು. ಪ್ರಾಚಾರ್ಯ ಎ ಎನ್ ಮೋದಗಿ ಸ್ವಾಗತಿಸಿದರು, ಶಿಕ್ಷಕ ಎಸ್ ಎ ಹಿರೇಮಠ ನಿರೂಪಿಸಿದರು