ಬಳ್ಳಾರಿ

ಗೌತಮ್ ಬಿ. ಎಮ್ ಅವರಿಗೆ ಪಿಎಚ್‌.ಡಿ ಪದವಿ

ಗೌತಮ್ ಬಿ. ಎಮ್ ಅವರಿಗೆ ಪಿಎಚ್‌.ಡಿ ಪದವಿ


ಬಳ್ಳಾರಿ,ಅ.01 :  ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಗೌತಮ್ ಬಿ. ಎಮ್ ಅವರಿಗೆ ಪಿಎಚ್‌.ಡಿ ಪದವಿ ಲಭಿಸಿದೆ.ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜ್ಯೋತಿಲಿಂಗ ವಿ. ಇವರ ಮಾರ್ಗದರ್ಶನದಲ್ಲಿ “ಕಸ್ಟಮರ್ಸ್‌ ಸ್ಯಾಟಿಸ್ಫ್ಯಾಕ್ಷನ್ ಟುವರ್ಡ್ಸ ಹೆಲ್ತ್‌ ಇನ್ಸೂರೆನ್ಸ್‌ : ಎ ಸ್ಟಡಿ ವಿತ್ ರೆಫರೆನ್ಸ್‌ ಟು ಸೆಲೆಕ್ಟ್‌ ಹೆಲ್ತ್‌ ಇನ್ಸೂರೆನ್ಸ್‌ ಕಂಪನೀಸ್ ಇನ್ ಕಲ್ಯಾಣ-ಕರ್ನಾಟಕ” ಎಂಬ ವಿಷಯದ ಮೇಲೆ ಮಹಾಪ್ರಬಂಧ ಮಂಡಿಸಿದ ಹಿನ್ನೆಲೆಯಲ್ಲಿ ಇವರಿಗೆ ಪಿಎಚ್‌.ಡಿ ಪದವಿ ನೀಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ. 


ಸುದ್ದಿ ಓದಿ