ಸದಸ್ಯರುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗೆ ಜಾಗೆಯ ಮಾಲೀಕನ ಮನವಿ
ಮಹಾಲಿಂಗಪುರ 14: ನನ್ನ ಸ್ವಂತ ಮಾಲ್ಕಿ ಜಾಗೆಯಲ್ಲಿ ಮನೆ ಕಟ್ಟುತ್ತಿದ್ದರೂ ಚರ್ಚ್ ಕಟ್ಟಲಾಗುತ್ತಿದೆ ಎಂದು ಆಡಳಿತದ ಮೇಲಾಧಿಕಾರಿಗಳಿಗೆ ಸುಳ್ಳು ಮನವಿ ನೀಡಿರುವ ಹಿಂದೂ ಸಂಘಟನೆಯ ಸದಸ್ಯರುಗಳ ಮೇಲೆ ಕ್ರಮ ಜರುಗಿಸಬೇಕೆಂದು ಶೇಖರ ಮಾರುತಿ. ಮಾಂಗ ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ದಡ್ಡಿ ಅವರ ಮೂಲಕ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಗೋಕಾಕ ರಸ್ತೆ ಪಕ್ಕದ ವಜ್ಜರ್ಮಟ್ಟಿ ಪ್ಲಾಟ್ ನಲ್ಲಿ ಅನಧಿಕೃತ ಚರ್ಚ ಕಟ್ಟಲಾಗುತ್ತಿದ್ದು, ಇದಕ್ಕೆ ನಮ್ಮ ಆಕ್ಷೇಪಣೆ ಇದೆ ಆದ್ದರಿಂದ ಶೀಘೃವಾಗಿ ಚರ್ಚ್ ತೆರುವುಗೊಳಿಸಬೇಕೆಂದು ನೆರೆಹೊರೆಯ ಹಿಂದೂ ಸಂಘಟನೆಯ ಕೆಲವರು ಎಸಿ, ತಹಶೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗಳಿಗೆ ಅಗಷ್ಟ 11ರಂದು ಮನವಿ ಸಲ್ಲಿಸಿದ್ದರು.
ಇದರ ವಿರುದ್ಧವಾಗಿ ಇದು ನಮ್ಮ ಸ್ವಂತ ಸ್ಥಳವಾಗಿದ್ದು ನಾವು ಮನೆ ಕಟ್ಟುತ್ತಿದ್ದೇವೆ. ವಿನಾಕಾರಣ ಕೆಲವು ಹಿಂದೂ ಸಂಘಟನೆಯ ಕಾರ್ಯಕರ್ತರು ನಮಗೆ ತೊಂದರೆ ಕೊಡುತ್ತಿದ್ದಾರೆ. ಇಂತಹವರ ವಿರುದ್ಧ ಬೇಗ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಮ್ಮೆ ಅಧಿಕಾರಿಗಳನ್ನು ಸೋಮವಾರ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಸದಸ್ಯರಾದ ಶೇಖರ ಮಾಂಗ, ಮಹೇಶ್ ಕಾಳಾ, ರಾಜು ಕುಂದ್ರಾಳ, ಪರಶುರಾಮ ಹೆದ್ದಾರಿ, ತುಕಾರಾಮ ಕೆಂಚನ್ನವರ್, ಶ್ರೀಕಾಂತ್ ಹಾದಿಮನಿ, ಸಂಗಪ್ಪ ಹೊಸಮನಿ, ಆನಂದ ಹಣಗಂಡಿ, ರಾಜಾರಾವ ದಾಸರೆ, ಮಂಜುನಾಥ ಹೊಳಿ, ಕಾಜು ಗಿಡ್ಡಣ್ಣವರ, ಲವಾ ಗಗ್ಗರಿ, ಅಂಬರಿಷ ಐಹೊಳೆ, ಪ್ರಜ್ವಲ್ ಕುಳಲಿ, ಸಂಗಪ್ಪ ಗಸ್ತಿ, ಕುಮಾರ್ ಮಾಂಗ, ದುಂಡಪ್ಪ ಮಾಂಗ ಇದ್ದರು.