ಇಂಡಿ

ಮಹಾ ಜನತೆ ಕಡ್ಡಾಯವಾಗಿ ಮಾಸ್ಕ ಧರಿಸಿ

ಮಹಾ ಜನತೆ ಕಡ್ಡಾಯವಾಗಿ ಮಾಸ್ಕ ಧರಿಸಿ

ಇಂಡಿ 23: ಕೊರೋನಾ ವೈರಸನ್ ಎರಡನೇ ಅಲೆ ತೀವೃತೆಯಿಂದ ಕೂಡಿದ್ದು ತಾಲೂಕಿನ ಮಹಾ ಜನತೆ ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಮತಕ್ಷೇತ್ರದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. 

ಅವರು ದೂರವಾಣಿ ಮೂಲಕ ಸುದ್ದಿಗಾರರೊಂದಿಗೆ ಮಾತನಾಡಿ ನನಗೂ ಕೂಡಾ ಕೊರೊನಾ ವೈರಸ್ ತಗುಲಿ ಕೊವಿಡ್‌-19 ಪಾಸಿಟಿವ್ ದೃಢಪಟ್ಟಿತು ಹಾಗಾಗಿ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಅಡಮಿಟ್ಟಾಗಿ ಐಶೊಲೆಷನ್ ವಾರ್ಡನಲ್ಲಿ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಆದ್ದರಿಂದ ದಯವಿಟ್ಟು ಯಾರು ಗಾಭರಿ ಪಡುವ ಅವಶ್ಯಕತೆ ಇಲ್ಲ ಕೊರೊನಾ-2ನೇ ಅಲೆ ತೀವ್ರತೆಯಿಂದ ಕೂಡಿದ್ದು ಆರೋಗ್ಯದ ಹಿತದೃಷ್ಟಿಯಿಂದ ತಾಲೂಕಿನ ಮಹಾಜನತೆ ಜಾಗೃತೆ ವಹಿಸುವುದು ಅನಿವಾರ್ಯವಾಗಿದೆ. ಪ್ರಸ್ತೂತ ಮದುವೆ ಸಿಜನ್, ಜಾತ್ರೆ, ಹರಿದಿನಗಳು ಹೆಚ್ಚಾಗಿರುವುದರಿಂದ  ಅನಾವಶ್ಯಕವಾಗಿ ಹೆಚ್ಚಿನ ಸಂಖೆಯಲ್ಲಿ ಜನರು ಸೇರುವುದು, ಸಭೆ ಸಮಾರಂಭಗಳನ್ನು ಮಾಡುವುದು ಸಮಂಜಸವಲ್ಲ ಎಂದರು. 

ಈಗಾಗಲೆ ತಾಲೂಕಾ ಆಡಳಿತ ಕೊವಿಡ್‌-19ರ ಕೋರೋನಾ ವೈರಸ್‌ನ-2ನೇ ಅಲೆಯ ತಿವೃತೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅದರಂತೆ ತಾಲೂಕಾ ಆಡಳಿತ ಮುಂಜಾಗೃತ ಕ್ರಮಕೈಗೊಂಡಿದೆ. ಮಹಾಮಾರಿ ಕೊವಿಡ್‌-19 ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು ತಾಲೂಕಿನ ಜನತೆಯಲ್ಲಿ ಮನವಿ ಮಾಡಿದ ಅವರು ಬರುವ ಏಫ್ರೀಲ್ 30ರವರೆಗೆ ಮತಕ್ಷೇತ್ರದಲ್ಲಿ ಸಿಗುವುದಿಲ್ಲ. ಆದ ಕಾರಣ ಮೇ-1ನೇ ತಾರಿಖಿನವರೆಗೆ ಕಾರ್ಯಕರ್ತರು, ಸಾರ್ವಜನಿಕರು ತಮ್ಮ ಯಾವುದೆ ಕುಂದು ಕೊರತೆ, ಸಮಸ್ಯಗಳಿದ್ದರು ದೂರವಾಣಿ ಮೂಲಕ ಸಂಪರ್ಕಿಸಿ ಇಲ್ಲಾ ಶಾಸಕರ ಜನಸಂಪರ್ಕ ಕಾರ್ಯಾಲಯದ ಆಪ್ತಸಹಾಯಕರಿಗೆ ತಿಳಿಸಿ ತಕ್ಷಣಕ್ಕೆ ಸಮಸ್ಯಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮತಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದ್ದಾರೆ. 



ಸುದ್ದಿ ಓದಿ