ಸಿಲಿಂಡರ್ ಗ್ಯಾಸ್ ಗಾಗಿ ಮುಗಿಬಿದ್ದ ಜನ : ವಿತರಕರ ಚೆಲ್ಲಾಟ, ಜನರಿಗೆ ಪ್ರಾಣ ಸಂಕಟ , ಗ್ಯಾಸ್ ಕಾಳಸಂತೆಯಲ್ಲಿ ಮಾರಾಟದ ಶಂಕೆ
ಬೆಳಗಾವಿ : ಒಂದು ಕಡೆಯಲ್ಲಿ ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಅಭಾವ ಇಲ್ಲ. ಗ್ಯಾಸ್ ಪಡೆಯಲು ಯಾವ ಸಮಸ್ಯೆ ಇಲ್ಲ ಅಂತಾ ಜಿಲ್ಲಾಧಿಕಾರಿಗಳು ಹೇಳಿಕೆ ನೀಡುತ್ತಾರೆ. ಆದರೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಸಿಲಿಂಡರ್ ಗ್ಯಾಸ್ ಸಿಗದೆ ಜನರು ಪರದಾಡುವಂತಾಗಿರುವ ದೃಶ್ಯ ಕಂಡು ಬಂದಿದ್ದು, ಗ್ಯಾಸ್ ಸರಬರಾಜ್ ಮಾಡುವ ಚಾಲಕರು ಸಿಲಿಂಡರ್ ಗಳನ್ನು ಬ್ಲಾಕ್ ಮೂಲಕ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾತು ನಾಗರಿಕರಿಂದ ಕೇಳಿ ಬಂದಿದೆ.
ಹೌದು ಓದುಗರೇ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಎಚ್ ಪಿ ಗ್ಯಾಸ್ ವಿತರಕರಿದ್ದು, ಇಲ್ಲಿ ಒಂದು ತಿಂಗಳ ಪೂರ್ಣ ಬಳಿಕ ಸಿಲಿಂಡರ್ ಗಾಗಿ ಬುಕ್ ಮಾಡಿ 5ರಿಂದ 8 ದಿನಗಳು ಕಳೆದರೂ ನಾಗರಿಕರಿಗೆ ಗ್ಯಾಸ್ ಸಿಗುತ್ತಿಲ್ಲ. ಈ ಬಗ್ಗೆ ಗ್ಯಾಸ್ ವಿತರಕರ ಕಚೇರಿಗೆ ಜನ ಹೋಗಿ ಕೇಳಿದರೆ ಮನಬಂದರೆ ಹಾರಿಕೆ ಉತ್ತರಗಳನ್ನು ಸಿಬ್ಬಂದಿಗಳು ನೀಡುತ್ತಿದ್ದಾರೆ.
ಗ್ಯಾಸ್ ಗಾಗಿ ಬುಕ್ಕ ಮಾಡಿ 6ರಿಂದ 8 ದಿನ ಕಳೆದಿದ್ದರು ನಿಮ್ಮ ಸಿಲಿಂಡರ್ ಇನ್ನು ಬಂದಿಲ್ಲ. ಇನ್ನು ಬಹಳ ದಿನಾ ಆಗುತ್ತದೆ. ಹೀಗೆಲ್ಲಾ ಗ್ಯಾಸ್ ಸಿಬ್ಬಂದಿಗಳು ಜನರನ್ನು ಬೆದರಿಸಿ ವಾಪಸ್ ಕಳಿಸುತ್ತಿದ್ದಾರೆ ಎನ್ನುವ ಮಾತು ಜನರಿಂದ ಕೇಳಿ ಬರತಾ ಇದೆ.
ಆದರೆ ದಿನ ನಿತ್ಯ ಸಿಲಿಂಡರ್ ವಾಹನಗಳು ಪಟ್ಟಣದಲ್ಲಿ ಅಲೇದಾಡುತ್ತಿದ್ದರು ಯೋಗ್ಯವಾಗಿ ಸಿಲಿಂಡರ್ ಬುಕ್ ಮಾಡಿದ ಜನರಿಗೆ ಸಿಲಿಂಡರ್ ಸಿಗತಾ ಇಲ್ಲ. ಒಂದೇಡೆ ಗ್ಯಾಸ್ ಸಿಲಿಂಡರ್ ಸರಬರಾಜ್ ಮಾಡುವ ವಾಹನ ಚಾಲಕರು ಕಾಳಸಂತೆಯಲ್ಲಿ ಬ್ಲಾಕ್ ನಿಂದ 2000 ಸಾವಿರದಿಂದ 2500 ರ ವರೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಜನರಿಂದ ಕೇಳಿಬರುತ್ತಿದೆ.
ಇತ್ತ ಜಿಲ್ಲಾಡಳಿತ ಹೇಳುತ್ತದೆ ಜಿಲ್ಲೆಯಲ್ಲಿ ಸಿಲಿಂಡರ್ ಗ್ಯಾಸ್ ಅಭಾವ ಇಲ್ಲ. ಯಾವದೆ ಸಮಸ್ಯೆ ಇಲ್ಲ ಅನ್ನುವ ಪತ್ರಿಕಾ ಹೇಳಿಕೆ ನೀಡುತ್ತಾರೆ. ಆದರೆ ಪಟ್ಟಣದಲ್ಲಿ ಜನರ ಗ್ಯಾಸ್ ಸಿಗದೆ ಪರದಾಟ ನಡೆಸುತ್ತಿರುವದು ಜನರ ಕಷ್ಟ ಹೇಳತಿರದಂತಾಗಿದೆ.