ಮಹಲಿಂಗಪುರ

ವಿಶ್ವದೆಲ್ಲೆಡೆ ಗೌರವ ಹೆಚ್ಚಿಸಿ ದೇಶಕ್ಕೆ ಮರ್ಯಾದೆ ತಂದುಕೊಟ್ಟವರು ಜನ ಸೇವಕ ಮೋದಿಜಿ : ತಾರಾ ಅನುರಾಧಾ

ವಿಶ್ವದೆಲ್ಲೆಡೆ ಗೌರವ ಹೆಚ್ಚಿಸಿ ದೇಶಕ್ಕೆ ಮರ್ಯಾದೆ ತಂದುಕೊಟ್ಟವರು ಜನ ಸೇವಕ ಮೋದಿಜಿ : ತಾರಾ ಅನುರಾಧಾ

ಮಹಾಲಿಂಗಪುರ: ವಿಶ್ವದೆಲ್ಲೆಡೆ ಗೌರವ ಹೆಚ್ಚಿಸಿ ದೇಶಕ್ಕೆ ಮರ್ಯಾದೆ ತಂದುಕೊಟ್ಟವರು ಯಾರಾದರೂ ಇದ್ದರೆ ಅದು ಜನ ಸೇವಕ, ದೇಶ ರಕ್ಷಕ ಪ್ರಧಾನಿ ನರೇಂದ್ರ ಮೋದಿಜಿ ಎಂದು ಚಲನಚಿತ್ರ ನಟಿ ತಾರಾ ಅನುರಾಧಾ ಅವರು ಅಭಿಮಾನದಿಂದ ಪ್ರಧಾನಿಯವರ ಗುಣಗಾನ ಮಾಡಿದರು. 

ತೇರದಾಳ ಮತ ಕ್ಷೇತ್ರದ ಅಭ್ಯರ್ಥಿ  ಸಿದ್ದು ಸವದಿ ಪರವಾಗಿ ಶನಿವಾರ ಭಾಜಪ ಪಕ್ಷದ ಸ್ಟಾರ್ ಪ್ರಚಾರಕರಾಗಿ ಮಹಾಲಿಂಗಪುರ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಭಾಜಪ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಷಣ ಆರಂಭಿಸಬೇಕಾದರೆ ಭಾರತ ಮಾತಾ ಕಿ ಜೈ ಎಂದು ಘೋಷಣೆ ಮೊಳಗಿಸುತ್ತಾರೆ ಇದು ಪಕ್ಷದ ಸಂಸ್ಕಾರ. ಪಕ್ಷದ ದೃಷ್ಟಿಯಲ್ಲಿ ದೇಶ ಮೊದಲು, ನಂತರ ಪಕ್ಷ, ತದನಂತರ ವ್ಯಕ್ತಿಗೆ ಮಹತ್ವ ನೀಡಲಾಗುತ್ತದೆ.ಇದು ನಮ್ಮ ಹಿರಿಯರು ಹಾಕಿಕೊಟ್ಟ ಸನ್ಮಾರ್ಗ ಎಂದು ಭಾಜಪ ಪಕ್ಷದ ಹೆಗ್ಗಳಿಕೆಯನ್ನು ಕೊಂಡಾಡಿದರು.

ತೇರದಾಳ ಕ್ಷೇತ್ರದಾದ್ಯಂತ ಮೂಲಭೂತ ಸೌಲಭ್ಯಗಳಿಗೆ ಒತ್ತುಕೊಟ್ಟು, ಗ್ರಾಮೀಣ ಮತ್ತು ಪಟ್ಟಣಗಳ ರಸ್ತೆಗಳು ರಾಜ್ಯ ಹೆದ್ದಾರಿಗಳನ್ನು ನೆನಪಿಸುವಂತೆ ಮಾಡಿರುವುದರಿಂದ ಚಲನಚಿತ್ರ ನಟ ಶಂಕರನಾಗ ಅವರಿಗೆ ಅಭಿಮಾನಿಗಳು ನೀಡಿದ ರಸ್ತೆ ರಾಜ ಬಿರುದನ್ನು ಗೌರವಪೂರ್ವಕವಾಗಿ ನಾನು ಶಾಸಕ ಸಿದ್ದು ಅಣ್ಣವರಿಗೆ ನೀಡಲು ಬಯಸುತಿದ್ದೇನೆ ಎಂದು ರಸ್ತೆಗಳ ಗುಣಮಟ್ಟವನ್ನು ಹಾಡಿ ಹೊಗಳಿದರು.

ಶಾಸಕ ಸವದಿ ಅವರು ಅನೇಕ ಜನಪರ ಕಾರ್ಯಗಳನ್ನು ಮಾಡಿ 2023ರ ಕ್ಷೇತ್ರದ ಅಭಿವೃದ್ಧಿಯ ಅಭ್ಯರ್ಥಿಯಾಗಿ ತಮ್ಮ ಬಳಿ ಬಂದಿದ್ದು, ಭಾಜಪ ಪಕ್ಷದ ಬಲವನ್ನು ಹೆಚ್ಚಿಸಲಿಕ್ಕೆ ಸವದಿ ಅವರಿಗೆ ತಾವು ಮತ್ತೊಮ್ಮೆ ಮತ ನೀಡಿ ಆಶಿರ್ವಾದಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ತೇರದಾಳ ಕ್ಷೇತ್ರದ ಅಭ್ಯರ್ಥಿ  ಸಿದ್ದು ಸವದಿ ಮಾತನಾಡಿ, ನಗರೋತ್ಥಾನ ಮತ್ತು ವಿಶೇಷ ಅನುದಾನ ಅಡಿಯಲ್ಲಿ ಮಹಾಲಿಂಗಪುರ ಪಟ್ಟಣಕ್ಕೆ ಐತಿಹಾಸಿಕ 15ಕೋಟಿ ಮೊತ್ತವನ್ನು ಚರಂಡಿ, ಕುಡಿಯುವ ನೀರು, ರಸ್ತೆ, ಅಲಂಕಾರಿಕ ದ್ವೀಪಗಳ ಅಳವಡಿಕೆ ಇನ್ನೂ ಹತ್ತು ಹಲವಾರು ಯೋಜನೆಗಳಿಗೆ ನೀಡಲಾಗಿದೆ. ಕ್ಷೇತ್ರ ಮತ್ತು ಮಹಾಲಿಂಗಪುರ ಪಟ್ಟಣದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ನನಗೆ ತಮ್ಮ ಮತ ನೀಡಬೇಕೆಂದು ಮತದಾರರಲ್ಲಿ ಕೇಳಿಕ್ಕೊಂಡರು.

ಚಲನಚಿತ್ರ ನಟಿ ತಾರಾ ಮತ್ತು ಶಾಸಕ ಸಿದ್ದು ಸವದಿ ಸಾವಿರಾರು ಕಾರ್ಯಕರ್ತರು, ಮುಖಂಡರೊಂದಿಗೆ ಪಟ್ಟಣದ ಬಸವೇಶ್ವರ ವ್ರತ್ತದಿಂದ ಜೋಡು ರಸ್ತೆ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. 

 ಈ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾಜಿ ವಿಪ ಸದಸ್ಯ ಅರುಣ ಶಹಾಪುರ, ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಮುಖಂಡರಾದ ಬಸನಗೌಡ ಪಾಟೀಲ್, ಸುರೇಶ ಅಕ್ಕಿವಾಟ್, ಮಹಾಲಿಂಗಪ್ಪ ಕುಳ್ಳೋಳ್ಳಿ, ಶ್ರೀಮಂತ ಹಳ್ಳಿ, ಶೇಖರ್ ಅಂಗಡಿ, ಮಹಾಂತೇಶ ಹಿಟ್ಟಿನಮಠ, ಎಂ ಆಯ್.ಕೋಳಿಗುಡ್ಡ, ಭಕ್ಷಿಸಾಬ ಯಾದವಾಡ, ಜಮೀರ್ ಯಕ್ಸಂಬಿ,ಅಶೋಕಗೌಡ ಪಾಟೀಲ್, ಈರಪ್ಪ ದಿನ್ನಿಮನಿ, ಜಿಎಸ್ ಗೊಂಬಿ, ಚನಬಸು ಯರಗಟ್ಟಿ, ರಾಜು ಚಮಕೇರಿ, ಆನಂದ ಕಂಪು ಇನ್ನು ಮುಂತಾದವರಿದ್ದರು.

ಸುದ್ದಿ ಓದಿ