ಗವಿ ಗ್ರೀನ್ ರೈತ ಉತ್ಪಾದಕರ ಕಂಪನಿ ನಿರ್ದೇಶಕರಾಗಿ ಪಾಟೀಲ್ ಆಯ್ಕೆ
ಯಲಬುರ್ಗಾ 03: ತಾಲೂಕಿನ ಕರಮುಡಿ ಗ್ರಾಮದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಮತ್ತು ಸಮಾಜ ಸೇವಕಿಯಾದ ಶಕುಂತಲಾದೇವಿ ಮಾಲಿ ಪಾಟೀಲ್ ಇವರು ಕೊಪ್ಪಳದ ಗವಿ ಗ್ರೀನ್ ರೈತ ಉತ್ಪಾದಕರ ಕಂಪನಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಕುಂತಲಾದೇವಿ ಮಾಲಿಪಾಟೀಲ್ ರವರು ಕಂಪನಿಯ ನಿರ್ಧಾರಗಳಿಗೆ ಬದ್ಧರಾಗಿ ದುಡಿದು ಆ ಮೂಲಕ ಕಂಪನಿಯ ಹೆಸರನ್ನು ಬಲಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಗವಿ ಗ್ರೀನ್ ರೈತ ಉತ್ಪಾದಕರ ಸಂಘದ ಜಿಲ್ಲಾ ಅಧ್ಯಕ್ಷ ವೀರಣ್ಣ ಕಮತರ ರವರು ಮಾತನಾಡಿ ಈ ಒಂದು ಸಂಘದ ಮುಖಾಂತರ ನಾವು ಜಿಲ್ಲೆಯಲ್ಲಿ ರೈತಪರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ರೈತರ ಬೆಳೆಗಳಿಗೆ ಉತ್ತಮ ಇಳುವರಿ ಕೊಡಿಸಲಾಗುವುದು ರೈತ ಸಂಸ್ಕರಣ ಮತ್ತು ಸಾವಯುವ ಆಧುನಿಕ ಕೃಷಿ ಪದ್ಧತಿಗಳಿಗೆ ಹೆಚ್ಚಿನ ಆಧ್ಯತೆ ಕೊಡಲಾಗುವುದು ಈ ದಿಶೆಯಲ್ಲಿ ನಮ್ಮ ಸಂಸ್ಥೆ ಸದಾ ಜನಪರವಾಗಿರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಇನ್ನಿತರ ಗಣ್ಯರು ಮತ್ತು ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.