ಕುಕನೂರ್

ಆತ್ಮವಿಶ್ವಾಸದಿಂದ ಮತ ಚಲಾಯಿಸಲು ಭದ್ರತಾ ಪಡೆಯಿಂದ ಪಥ ಸಂಚಲನ

ಆತ್ಮವಿಶ್ವಾಸದಿಂದ ಮತ ಚಲಾಯಿಸಲು ಭದ್ರತಾ ಪಡೆಯಿಂದ ಪಥ ಸಂಚಲನ

ಲೋಕದರ್ಶನ ವರದಿ 

ಕುಕನೂರು  10: ಮೇ ಹತ್ತರಂದು ನಡೆಯುವ  ಕರ್ನಾಟಕ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರ-63 ವ್ಯಾಪ್ತಿಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ  ಯೋಧರ ಪಡೆ ಮತ್ತು ಕುಕುನೂರು, ಬೇವೂರು ಪೊಲೀಸ್ ಪಡೆಗಳಿಂದ ಮಂಗಳೂರಿನ ಪ್ರಮುಖ ಸ್ಥಳಗಳ ಮುಖಾಂತರ ಪಥ ಸಂಚಲನ ನಡೆಯಿತು. ಮಂಗಳೂರು ಗ್ರಾಮದ  ಸರಕಾರಿ ಪ್ರೌಢಶಾಲೆ ಇಂದ, ಗ್ರಾಮದ ಪ್ರಮುಖ ವೃತ್ತಗಳಲ್ಲಿ ಹಾಗೂ, ಬಸ್ ನಿಲ್ದಾಣ,  ಸಂತೆ ಬಜಾರ್ ಮಾರ್ಗವಾಗಿ ಮುದುಕೇಶ್ವರ ದೇವಸ್ಥಾನದವರೆಗೂ ಪಥ ಸಂಚಲನ ನೆರವೇರಿತು.ಈ ವೇಳೆ ಸಾರ್ವಜನಿಕರು ಮತ್ತು ಮಹಿಳೆಯರು ಪಥ ಸಂಚಲನದ ಹಾದಿಯಲ್ಲಿ ಹೂಗಳನ್ನು ಹಾಕಿ ಯೋಧರಿಗೆ ಆರತಿಯನ್ನು ಮಾಡುವುದರ ಮುಖಾಂತರ ಯೋಧರನ್ನು ಸನ್ಮಾನಿಸಿದರು.ಜಾಥಾ ಕಾರ್ಯಕ್ರಮದಲ್ಲಿ ಮಂಗಳೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಶ್ರೀಮತಿ ನೀಲಂ ಚಳಗೇರಿ ಹಾಗೂ ಸಿಬ್ಬಂದಿ ವರ್ಗ, ಕುಕನೂರ್ ಪೊಲೀಸ್ ನೀರೀಕ್ಷಕರಾದ ಡಾಕೇಶ್ ಯು, ಬೇವೂರ್ ಪೊಲೀಸ್ ಠಾಣೆಯ ನೀರೀಕ್ಷಕರಾದ ಶ್ರೀಮತಿ ಶೀಲಾ ಮೂಗಪ್ಪನವರ್ ಹಾಗೂ ಪೊಲೀಸ್ ಮತ್ತು ಭದ್ರತಾ ಪಡೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ವರದಿ. ಎಂ ಎಸ್ ಮೆತಗಲ್ 


ಸುದ್ದಿ ಓದಿ