ಮಹಲಿಂಗಪುರ

ಸೋಲು ಗೆಲುವಿಗಿಂತ ಪಂದ್ಯಾವಳಿಗಳಲ್ಲಿ ಭಾಗವಹಿಸುವುದು ಮುಖ್ಯ: ಢವಳೇಶ್ವರ

ಸೋಲು ಗೆಲುವಿಗಿಂತ ಪಂದ್ಯಾವಳಿಗಳಲ್ಲಿ ಭಾಗವಹಿಸುವುದು ಮುಖ್ಯ: ಢವಳೇಶ್ವರ


ಮಹಾಲಿಂಗಪುರ : ವಿದ್ಯಾರ್ಥಿಗಳು ಪಂದ್ಯಾವಳಿಗಳಲ್ಲಿ ಭಾಗವಹಿಸುವುದು ಅವರ ಮೊದಲ ಪ್ರಾಶಸ್ತ್ಯವಾಗಿರಬೇಕೆ ಹೊರತು ಸೋಲು-ಗೆಲುವು ಕಡೆಗೆ ಗಮನ ಕೊಡಬಾರದು ಎಂದು ಕೆಸರಗೊಪ್ಪ ಗ್ರಾಂ. ಪಂಚಾಯತ ಅಧ್ಯಕ್ಷೆ ರಾಜೇಶ್ವರಿ ಢವಳೇಶ್ವರ ಹೇಳಿದರು.  

ಸಮೀಪದ ಕೆಸರಗೊಪ್ಪ ಪ.ಪೂ. ಕಾಲೇಜಿನಲ್ಲಿ ಜಿಲ್ಲಾ ನೆಹರು ಯುವ ಕೇಂದ್ರ, ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ಮತ್ತು ಮಹಾಶರಣ ಸುಜ್ಞಾನ ಸಂಸ್ಥೆಯಡಿ, ರಬಕವಿ-ಬನಹಟ್ಟಿ ತಾಲೂಕಾ ಅಂತರ ಯುವ ಸಂಘಗಳ ಕ್ರೀಡಾಕೂಟ ಉದ್ಘಾಟಿಸಿ, ಇತ್ತಿಚೆಗೆ ವಿದ್ಯಾರ್ಥಿಗಳು ಮೋಬೈಲನಲ್ಲಿ ಮಗ್ನರಾಗಿ ತಮ್ಮ ಅಮೂಲ್ಯ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬದಲಾಗಿ ವ್ಯಾಯಾಮ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿದರೆ ಆರೋಗ್ಯ ವೃದ್ಧಿಯೊಂದಿಗೆ ಸುಂದರ ಮೈಕಟ್ಟು ಹೊಂದಬಹುದು ಎಂದರು. 

ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್ ಗೊಂಬಿ ಮಾತನಾಡಿ, ಗ್ರಾಮೀಣ ಭಾಗಕ್ಕೆ ಇಂತಹ ಕ್ರೀಡಾಕೂಟಗಳಿಂದ ದೇಶಿಯ ಕ್ರೀಡೆಗಳಾದ ಕಬಡ್ಡಿ, ಕೋಕೋ ಇನ್ನಿತರೆ ಆಟಗಳೊಂದಿಗೆ ಕ್ರಿಕೆಟ್, ವ್ಹಾಲಿಬಾಲ್, ಪುಟ್ಬಾಲ್ ಗಳಿಗೂ ಹೆಚ್ಚಿನ ಮನ್ನಣೆ ಸಿಕ್ಕಿದ್ದು ಮುಂದಿನ ಹಂತಗಳಿಗೆ ಸಾಗಲು ಈ ಕ್ರೀಡಾ ಕೂಟವನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪಾನಿಪುರಿ, ಕುರಕುರೆ, ನೂಡಲ್ಸ್‌ ಇತ್ಯಾದಿ ವಿಷಕಾರಿ ಪದಾರ್ಥಗಳಿಂದ ದೂರವಿದ್ದು, ಮನೆಯಲ್ಲಿ ತಾಯಿ ತಯಾರಿಸಿದ ವಿಟ್ಯಾಮಿನ ಭರಿತ ದೇಶಿ ಊಟದ ಕಡೆ ಹೆಚ್ಚಿನ ಗಮನ ಹರಿಸಬೇಕು.ಆಗ ತಾವು ಶಕ್ತಿವಂತರಾಗಿ ಪಂದ್ಯಾವಳಿಗಳಲ್ಲಿ ತಮ್ಮಲ್ಲಿರುವ ಪ್ರತಿಭೆ ಹೊರಹಾಕಲು ಸಾಧ್ಯವಾಗುತ್ತದೆ ಎಂದರು. 

ಇದೇ ಸಂದರ್ಭದಲ್ಲಿ ಮಹಾಶರಣ ಸುಜ್ಞಾನ ಸಂಸ್ಥೆ ಸದಸ್ಯರು, ದೈಹಿಕ ಶಿಕ್ಷಕರು ಮತ್ತು ಕ್ರೀಡಾಕೂಟದ ನಿರ್ಣಾಯಕರು ಮತ್ತು ಗಣ್ಯರನ್ನು ಶಾಲು ಹೊದಿಸಿ ಸನ್ಮಾನಿಸಿದರು. 

ಗ್ರಾಮದ ಮುಖಂಡರಾದ ಮಾರುತಿ ಕರೋಶಿ ಮಾತನಾಡಿ, ಪಂದ್ಯಾವಳಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿ ಮೆರೆಯಲು ಕರೆ ನೀಡಿದರು. 

ವೇದಿಕೆ ಮೇಲೆ ಡಾ. ಎಂ.ಬಿ. ಪೂಜಾರಿ, ಧರೆಪ್ಪ ಬ್ಯಾಕೋಡ, ಮಾರುತಿ ಕರೋಶಿ, ಮಲ್ಲಿಕಾರ್ಜುನ ಕಾನಟ್ಟಿ, ಸಿದ್ದು ಸತ್ತಿಗೇರಿ, ವಿಠ್ಠಲ ಬನಾಜ, ಬಸವರಾಜ ಜಿಡ್ಡಿಮನಿ, ಕಾನಿಪ ಸಂಘದ ಅಧ್ಯಕ್ಷ ಮಹೇಶ ಆರಿ, ರುದ್ರ​‍್ಪ ಹಳಮನಿ, ಸಂಗಮೇಶ ಮುಕರ್ತಿಹಾಳ, ಪತ್ರಕರ್ತರಾದ ಮೀರಾ ತಟಗಾರ, ಹನಮಂತ ನಾವಿ ಮತ್ತು ಜ್ಯೋತೆಪ್ಪ ಕಪರಟ್ಟಿ, ಶ್ರೀಶೈಲ ಚೌಗಲಾ, ಶ್ರೀನಿವಾಸ ಕಾಂಬಳೇಕರ, ವಾಯ್‌.ಎ ಮಗದುಮ, ಸಿ.ವಿ ದಾದನಟ್ಟಿ, ಎಚ್‌.ಡಿ. ಬ್ಯಾಕೋಡ, ಸುನೀಲ ಜಾಧವ, ಸಿ.ಆರ್ ಕುದರಿಮನಿ, ಕಲ್ಲು ಕೋಟಿ, ಬಿ.ಎಂ ಸಿದ್ನಾಳ, ಪಿ.ಬಿ ಕೌಜಲಗಿ, ಎಸ್‌.ಎನ್‌. ತೋಳಮಟ್ಟಿ, ಚಿದಾನಂದ ದಳವಾಯಿ, ಎಂ.ಬಿ ಮಣ್ಣೀಕೇರಿ, ಆರ್‌.ವಾಯ್‌. ಮೇತ್ರಿ. ಮಲ್ಲಿಕಾರ್ಜುನ ಕಾನಟ್ಟಿ, ಸದಾಶಿವ ಯಾದವ, ಉಸ್ಮಾನ ಪೆಂಡಾರಿ ಮತ್ತು ಸಂಚಾಲಕರಾದ ಲಕ್ಷ??ಣ ಕಿಶೋರ, ಭೀಮಪ್ಪ ನೇಗಿನಾಳ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ