ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಪಾಲಕರ ಪಾತ್ರ ದೊಡ್ಡದು : ಬ್ಯಾಳಿ
ಮಹಾಲಿಂಗಪುರ : ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರು, ಒಂದು ಮಗು ಹುಟ್ಟಿದ ತಕ್ಷಣ ಅದರ ಮೊದಲ ಲಾಲಣೆ ಪಾಲನೆ ಎಲ್ಲವೂ ತಾಯೀನೇ ಆಗಿರುತ್ತಾಳೆ. ಮಗು ತಾಯಿಯ ಮಡಿಲಲ್ಲಿ ಇರುವುವರೆಗೆ ತಾಯಿ ಗುರುವಾಗಿರುತ್ತಾಳೆ. ಯಾವುದೇ ಮಗು ಉತ್ತಮ ಪ್ರಜೆಯಾಗಿ ಭವ್ಯ ಭಾರತದ ನಾಗರೀಕನಾಗಿ ಬೆಳೆಯಲು ತಂದೆ ತಾಯಿ ಉತ್ತಮ ಸಂಸ್ಕಾರ ಕೊಡುವುದು ಬಹಳ ಮುಖ್ಯ ಎಂದು ಎಸ್ ಏನ್ ಬ್ಯಾಳಿ ಗುರುಗಳು ಹೇಳಿದರು.
ಕೆ ಜಿ ಎಸ್ ವಲಯ ಸಂಪನ್ಮೂಲ ವ್ಯಕ್ತಿಗಳಾದ ಎಸ್ ಏನ್ ಬ್ಯಾಳಿ ಅವರು ನಗರದ ಶಾಂತಿನಿಕೇತನ ಬಡಾವಣೆಯಲ್ಲಿರುವ ವೈದ್ಯರ ಸಮುದಾಯ ಭವನದಲ್ಲಿ ನಡೆದ ದಾನೇಶ್ವರಿ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಚಿಣ್ಣರ ಚಿಲಿಪಿಲಿ, ಗುರುನಮನ, ಉಪನ್ಯಾಸ, ಮತ್ತು ಅನ್ನದಾತರ ಅಭಿನಂದನೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದರು. ಯಾವುದೇ ಮಗು ಹುಟ್ಟುತ್ತಲೇ ದಡ್ಡ ಅಥವಾ ಜಾಣ ಇರುವುದಿಲ್ಲ ತಂದೆ ತಾಯಿ ಕೊಡುವ ಸಂಸ್ಕಾರದಲ್ಲಿ ಅಡಗಿದೆ, ಎಲ್ಲಾ ಮಕ್ಕಳಿಗೆ ತಂದೆ ತಾಯೀನೇ ಹೀರೋಗಳಾಗಿರುತ್ತಾರೆ. ಮಕ್ಕಳನ್ನು ರೂಪಿಸುವಲ್ಲಿ ಪಾಲಕರ ಪಾತ್ರ ಬಹಳ ದೊಡ್ಡದು ಎಂದು ಹೇಳಿದರು.
ಈ ಸಂಧರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್ ಎಂ ಅಣ್ಣಿಗೇರಿ ಪ್ರಸ್ತಾವಿಕ ಹಾಗೂ ಅಥಿತಿ ಗುರುಪಾದ ಅಂಬಿ ಮಾತನಾಡಿದರು ಪುರಸಭೆ ಸದಸ್ಯ ಹಾಗೂ ದಾನೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚನ್ನಬಸು ಯರಗಟ್ಟಿ, ಈರ್ಪ ದಿನ್ನಿಮನಿ, ಶಂಕರಗೌಡ ಪಾಟೀಲ, ಭೀಮಶಿ ಗೌಠ, ಎಫ್ ಟಿ ಸಂಶಿ,ಗುರುಪಾದಯ್ಯ ಚಟ್ಟಿಮಠ ಎಸ್ ಜಿ ರಡ್ದೆರಟ್ಟಿ,, ಮಹೇಶ ಆರಿ, ಬಸಪ್ಪ ಕೊಪ್ಪದ, ಸಂಜು ರಾಠೋಡ್, ಮಲ್ಲಯ್ಯ ನಂದಗಾಂವಮಠ, ಈರ್ಪ ಜಿಗೆರಿ,ಸಿದ್ದೇಶ್ವರ ಮಠಪತಿ, ಮಹಾಂತೇಶ ಕುರನಿಮಠ, ಸಿ ಎಸ್ ಮಠಪತಿ, ಪರಶುರಾಮ ಆಗಾರವಾಲ,ಬಸವರಾಜ್ ಮಠದ, ಶಾರದಾ ಬ ಮಠದ,ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಸನ್ಮಾನ : ಶಾಲೆಯ ಗುರುಗಳನ್ನು, ಅನ್ನದಾತರನ್ನು ಅನೇಕ ಜನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು, ಅನೇಕ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು, ನಂತರ ಸಾಂಸ್ಕ್ರೀತಿಕ ಕಾರ್ಯಕ್ರಮ ನಡೆದವು
ಈ ಕಾರ್ಯಕ್ರಮದಲ್ಲಿ ಮುಖಂಡರಾದ, ಮಲ್ಲು ತೋಟದ, ಎಸ್ ಎಸ್ ಮಠದ ಪ್ರವೀಣ ಚೆನ್ನಿ, ಚೇತನ ಹುಲ್ಲೂರ ವಿಠಲ ಬಾಪೂರೆ, ಸಾಗರ ಆರಿ,ಗುರುಲಿಂಗಯ್ಯ ಮಠಪತಿ,ಸಾಗರ ಮಠದ,ಸಚಿನ್ ಗೋನಾಳ, ಸೇರಿ ಹಲವರು ಇದ್ದರು. ಕಾರ್ಯಕ್ರಮವನ್ನು ನರನಗೌಡ ಉತ್ತಂಗಿ ಹಾಗೂ ರೇಣುಕಾ ನಿರೂಪಿಸಿ ವಂದಿಸಿದರು.