ಮಹಲಿಂಗಪುರ

ನಮ್ಮ ಪರಂಪರೆ: ಪಾಲಕರ ಪಾದ ತೊಳೆದ ವಿದ್ಯಾರ್ಥಿಗಳು

ನಮ್ಮ ಪರಂಪರೆ: ಪಾಲಕರ ಪಾದ ತೊಳೆದ ವಿದ್ಯಾರ್ಥಿಗಳು

ಮಹಾಲಿಂಗಪುರ 09: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪ್ರೌಢಶಾಲೆಯಲ್ಲಿ ನಮ್ಮ ಪರಂಪರೆ ಕಾರ್ಯಕ್ರಮದಡಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲೆಯ ಅಂಗಳದಲ್ಲಿ ಪಾಲಕರನ್ನು ಡೆಸ್ಕ್‌ ಮೇಲೇ ಕೂಡ್ರಿಸಿ ತಟ್ಟೆಯಲ್ಲಿ ಪಾದಗಳನ್ನಿರಿಸಿ ತೊಳೆದು ಹೂಮುಡಿಸಿ ಪೂಜೆ ಮಾಡಿ ಹಣೆ ಮಣಿದು ಆಶೀರ್ವಾದ ಪಡೆದರು. ನಂತರಾದ ತೊಳೆದ ನೀರನ್ನು ಹೂಗಿಡಗಳಿಗೆ ಉಣಿಸಿದರು. ಇಂಥ ಭಾವಪೂರ್ಣ ಕಾರ್ಯಕ್ರಮದಲ್ಲಿ ಪಾಲಕರು ಭಾವುಕರಾದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆಎಲ್‌ಇ ಡಿಪ್ಲೋಮಾ ಕಾಲೇಜ್ ಪ್ರಾಚಾರ್ಯ ಎಸ್‌.ಐ.ಕುಂದಗೋಳ ಮಾತನಾಡಿ, ವಿದ್ಯಾರ್ಥಿಗಳು ಹೆತ್ತವರಿಗೆ ಋಣಿಯಾಗಿ, ಗುರುಗಳಿಗೆ ವಿಧ್ಯೇಯರಾಗಿ, ಸಮಾಜದಲ್ಲಿ ಸಜ್ಜನ ನಾಗರಿಕರಾಗಿ ಬಾಳಬೇಕು, ಪಾಲಕರು ದಾರಿ ತಪ್ಪಿಸುವ ಧಾರಾವಾಹಿ ಮೋಹದಿಂದ ಹೊರಬಂದು ಮಕ್ಕಳಿಗೆ ಸಂಸ್ಕಾರ ಕೊಡುವ ಮೂಲಕ ದಾರಿ ತೋರಿಸುವ ಕೆಲಸ ಮಾಡಬೇಕು ಎಂದರು.ಪ್ರೌಢಶಾಲೆಯ ಉಪಪ್ರಾಂಶುಪಾಲ ಬಿ.ಎನ್‌.ಅರಕೇರಿ ಮಾತನಾಡಿ ಪಾಲಕ, ಶಿಕ್ಷಕ, ಬಾಲಕರ ನಡುವಿನ ಬಾಂಧವ್ಯ ವೃದ್ದಿಗಾಗಿ ಇಂಥ ಮೌಲ್ಯಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ವಿಜ್ಞಾನ ಶಿಕ್ಷಕಿ ಸಪನಾ ಅನಿಗೋಳ ಸಂಘಟಿಸಿದ್ದರು. ಡಿ.ಬಿ.ಬಿಸನಾಳ, ಉಮಾ ಗುಂಡಾ, ಪ್ರತಿಮಾ ಪಡೇಸೂರ, ರಮೇಶಬಾಬು ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ