ಮಹಲಿಂಗಪುರ

ನಮ್ಮ ಸಂವಿಧಾನವೇ ನಮಗೆಲ್ಲ ಶಕ್ತಿ: ಆರ್ ಡಿ ಗಲಗಲಿ

ನಮ್ಮ ಸಂವಿಧಾನವೇ ನಮಗೆಲ್ಲ ಶಕ್ತಿ: ಆರ್ ಡಿ ಗಲಗಲಿ

ಮಹಾಲಿಂಗಪುರ 26:  ರನ್ನಬೆಳಗಲಿ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರದಂದು ಭಾರತದ ಸಂವಿಧಾನ ದಿನವನ್ನು ಆಚರಿಸಲಾಯಿತು. 

ಮುಖ್ಯಶಿಕ್ಷಕ ಆರ್ ಡಿ ಗಲಗಲಿ ಕಾರ್ಯಕ್ರಮವನ್ನು ಉದ್ಘಾಟಿಸಿ,ನಮ್ಮ ಸಂವಿಧಾನವೇ ನಮಗೆಲ್ಲ ಶಕ್ತಿ. ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ನಿರಂತರ ಶ್ರಮದ ಫಲವೇ ಬೃಹತ್ ಸಂವಿಧಾನ. ಮನೆಯಲ್ಲಿ ತಂದೆ ನೀಡುವ ನ್ಯಾಯದಂತೆ, ಭಾರತದ ಪ್ರತಿ ಪ್ರಜೆಗೆ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿ ಸಮರ್ಥವಾಗಿ ದೇಶ ಕಟ್ಟಿ ಬದುಕುವ ಕಲೆಯನ್ನು ಸಂವಿಧಾನ ನೀಡಿದೆ ಎಂದು ತಿಳಿಸಿದರು.   

ಆರ್ ಡಿ ಬಂಡಿ ಶಿಕ್ಷಕಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ ಭಾವದ ಮೂಲಕ. ಪ್ರತಿ ಪ್ರಜೆಗೂ ಸಮಾನ ಅವಕಾಶವನ್ನು ಕಲ್ಪಿಸುವ ಉದ್ದೇಶ ದಿಂದ.ಸ್ಥಾಪನೆಯಾದ ನಮ್ಮ ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸದರು. 

ರಾಘವೇಂದ್ರ ನೀಲನ್ನವರ ಯೋಗ ಶಿಕ್ಷಕ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ರೂಪಾ ದಂಡಿನ ಶಿಕ್ಷಕಿ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ ವಂದಿಸಿದರು. ಎಸ್ ಪಿ ಜೋಶಿ, ಎಸ್ ಎಚ್ ಮಾದರ,ಎಚ್ ಬಿ ಜಮಾದಾರ, ಶೋಭಾ ವೀರಘಂಟಿ, ಭಾರತಿ ಮಳ್ಳಿಗೇರಿ, ಕಾಳಮ್ಮ ಬಡಿಗೇರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ