ಮಹಲಿಂಗಪುರ

ಪ್ರಾಚೀನ ಕ್ರೀಡೆಗಳು ಮುಂದಿನ ಪೀಳಿಗೆಗೆ ಬಳವಳಿಯಾಗಲು ಕ್ರೀಡೆಗಳ ಆಯೋಜನೆ ಅವಶ್ಯ: ಅಜಯಕುಮಾರ ಸರನಾಯಕ

ಪ್ರಾಚೀನ ಕ್ರೀಡೆಗಳು ಮುಂದಿನ ಪೀಳಿಗೆಗೆ ಬಳವಳಿಯಾಗಲು ಕ್ರೀಡೆಗಳ ಆಯೋಜನೆ ಅವಶ್ಯ: ಅಜಯಕುಮಾರ ಸರನಾಯಕ

ಭಾನುವಾರ ಏಕತಾ ಟ್ರೋಫಿ ಟೆನಿಸ್ ಬಾಲ್ ಅಂತರ್ ರಾಜ್ಯ ಕ್ರಿಕೆಟ್ ಪಂದ್ಯಾವಳಿಗೆ ತೆರೆ 

ಮಹಾಲಿಂಗಪುರ 07: ಯಾವುದೇ ಕ್ರೀಡೆಯಾಗಿರಲಿ ಅದು ಮುಂದಿನ ಪೀಳಿಗೆಗೆ ಬಳವಳಿಯಾಗಿ ಸಾಗಲು ಕ್ರಿಕೆಟ್ ನಂತಹ ಕ್ರೀಡೆಗಳ ಆಯೋಜನೆ ಅತ್ಯವಶ್ಯವಾಗಿದೆ ಎಂದು ಮಾಜಿ ಯುವಜನ ಕ್ರೀಡಾ ಇಲಾಖೆ ಸಚಿವ ಅಜಯ್ ಕುಮಾರ್ ಸರನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು. 

ಭಾನುವಾರ ಸ್ಥಳೀಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ದಿ.ಪುನೀತರಾಜಕುಮಾರ ಹಾಗೂ ದಿ. ಜಾವೇದ್ ಭಾಗವಾನ ಸ್ಮರಣೆಯಲ್ಲಿ ಎರಡನೇ ವರ್ಷದಲ್ಲಿ ನಡೆದ ಏಕತಾ ಟ್ರೋಫಿ ಟೆನಿಸ್ ಬಾಲ್ ಅಂತರ್ರಾಜ್ಯ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. 

ಕ್ರೀಡಾ ಆಯೋಜನೆ ಅಷ್ಟು ಸುಲಭವಲ್ಲ, ಆಯೋಜಕರು ಅಲ್ಲಿ, ಇಲ್ಲಿ ಕಷ್ಟದಿಂದ ಹಣ ಹೊಂದಿಸಿ, ನಿಂದನೆಗೊಳಗಾಗಿ ಮೂರು ತರಹದ ನೆಮ್ಮದಿಗೆ ಕಾರಣರಾಗುತ್ತಾರೆ. ಅದು ಪ್ರೇಕ್ಷಕರು, ಪ್ರತಿಭೆಗಳು ಮತ್ತು ಸ್ವ ನೆಮ್ಮದಿ ಆಗಿದೆ. ಆದ್ದರಿಂದ ಇಂತಹ ಅವಕಾಶಗಳಲ್ಲಿ ದಾನಿಗಳು ಮುಂದೆ ಬರಬೇಕು ಅಲ್ಲದೆ ಕ್ರೀಡಾಳುಗಳೂ ಸಹ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಮೂಲಕ ತಮಗಾಗಿ ಮಾಡಿರುವ ಕ್ರೀಡಾ ವೇದಿಕೆಯನ್ನು ಸರಿಯಾಗಿ ಬಳಸಿಕ್ಕೊಳ್ಳಬೇಕು ಎಂದು ಕ್ರೀಡಾ ಪಟುಗಳಿಗೆ ತಿಳಿ ಹೇಳಿದರು. 

ಹಿರಿಯ ಮುಖಂಡರಾದ ದರೆಪ್ಪ ಸಾಂಗ್ಲಿಕರ ಹಾಗೂ ಸಿದ್ದು ಕೊಣ್ಣೂರ ಮಾತನಾಡಿ, ಇಂತಹ ಕ್ರೀಡಾ ಉತ್ಸಾಹಕರಿಂದಲೆ ಅಲ್ಲಲ್ಲಿ ಪಂದ್ಯಾವಳಿಗಳು ನಡೆದು, ನಮ್ಮ ಪ್ರಾಚೀನ ಆಟಗಳಿಗೆ ಮರು ವೈಭವ ದೊರೆಯುತ್ತಿವೆ. ಅಲ್ಲದೆ ಜೀವನದುದ್ದಕ್ಕೂ ನಾವು ಕೂಡ ಆರೋಗ್ಯವಂತರಾಗಿರಲು ಕ್ರೀಡೆ ಅಷ್ಟೇ ಮಹತ್ವ ಪಡೆದುಕೊಂಡಿದೆ ಎಂದರು. ಧುರೀಣರಾದ ಶೇಖರ ಅಂಗಡಿ, ಮಹಾಲಿಂಗಪ್ಪ ಇಟ್ನಾಳ ಮತ್ತು ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿದರು. 

ಪಂದ್ಯಾವಳಿಯಲ್ಲಿ 30ತಂಡಗಳು ಭಾಗವಹಿಸಿ, ಅಂತಿಮವಾಗಿ ಡಿ ಬಾಯ್ಸ್‌ ತುಳಜಾಪೂರ ತಂಡವು ಯಾವುದೇ ಹುದ್ದರಿ ಕಳೆದುಕ್ಕೊಳ್ಳದೆ 4 ಓವರ್ ಗಳಲ್ಲಿ 66 ಓಟಗಳನ್ನು ಗಳಿಸುವ ಮೂಲಕ ಗೋವಾ ತಂಡವನ್ನು ಫರಾಭವಗೊಳಿಸಿ 1,11,111/- ನಗದು ಹಾಗೂ ಏಕತಾ ಟ್ರೋಫಿ ತನ್ನದಾಗಿಸಿಕೊಂಡಿತು.ನಂತರದ ದ್ವಿತೀಯ ಸ್ಥಾನವನ್ನು ಎಪಿ ರಾಯರ್ ಬಾಯ್ಸ್‌ ಗೋವಾ ತಂಡ 55,555/-ನಗದಿನೊಂದಿಗೆ ಪಾರಿತೋಷಕ ಪಡೆಯಿತು.ನಂತರದ 3 ಮತ್ತು 4ನೇ ಸ್ಥಾನಗಳಿಗೆ ತಲಾ 15,555/- ನಗದು ಹಾಗೂ ಟ್ರೋಫಿಗಳಿಗೆ ಬೆಳಗಾವಿ ಹಾಗೂ ವಿಜಯಪುರ ತಂಡಗಳು ಭಾಜನವಾದವು. ಪಂದ್ಯಾವಳಿಯ ಶ್ರೇಷ್ಠ ಸಾಧಕರಿಗೆ ಅನೇಕ ವಯಕ್ತಿಕ ಬಹುಮಾನಗಳನ್ನು ಇದೆ ಸಂದರ್ಭದಲ್ಲಿ ವಿತರಿಸಲಾಯಿತು. 

ಅಂತಿಮ ಪಂದ್ಯದ ಮುಂಚಿತವಾಗಿ ಎಂ ಕೆ. ಕ್ರೀಡಾಂಗಣದಲ್ಲಿ ವಿಕೆ ಆಕ್ಯಾಡೆಮಿ ಟಿವಿ ಡಾನ್ಸ್‌ ಬಳಗದಿಂದ ದಿ.ಪುನೀತರಾಜಕುಮಾರ ಹಾಗೂ ದಿ.ಜಾವೇದ್ ಭಾಗವಾನ್ ಅವರ ಜೀವನದ ಕೊನೆಯ ಯಾತ್ರೆಯ ಅಣಕು ಪ್ರದರ್ಶನದೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲರ ಕಣ್ಣುಗಳು ತೇವಗೊಂಡಿದ್ದವು. 

ಗಣ್ಯರಾದ ಮಾಜಿ ಪುರಸಭಾ ಅಧ್ಯಕ್ಷ ಬಸವರಾಜ ರಾಯರ, ಬಲವಂತಗೌಡ ಪಾಟೀಲ್, ರಮೇಶ್ ಕೆಸರಗೊಪ್ಪ, ಮಹಾಲಿಂಗಪ್ಪ ತಟ್ಟಿಮನಿ, ಎಚ್ ಆರ್ ರಂಗನಾಥ್, ಪಾಪಾ ನಾಲಬಂದ, ಅಮೃತ ನಾಶಿ, ಸುಭಾಸ ಸಣ್ಣಕ್ಕಿ, ಲಕ್ಷ್ಮಣ ಕತ್ತಿ, ರಾಜು ಮುಲ್ಲಾ, ರವಿ ಜವಳಗಿ, ಮುನ್ನಾ ಕರಡಿ, ಎಸ ಡಿ. ಮಾಗಿ, ಶಿವಶಂಕರ ಗುಜ್ಜರ್, ಮಹೇಶ್ ಆರಿ,ಅಪೋಲೋ ಜಿತೇಂದ್ರ, ಅಮೀತ, ಪ್ರಕಾಶ ಕರ್ಲಟ್ಟಿ, ಮಹಾದೇವ ಕಡಬಲ್ಲವರ, ಹಾರೂನ್ ಬೇವೂರು, ಮಲಿಕ ಬಾರಿಗಡ್ಡಿ, ನಜೀರ್ ಜಾರೆ, ಬುಡ್ಡಾ ಪೆಂಡಾರಿ, ಮಲ್ಲು ಪಾಶ್ಚಾಪೂರ, ಆಯೋಜಕರು ಸೈಯದ್ ಶೇಖ್, ಆಫ್ರಿದಿ ಪಕಾಲಿ, ಪ್ರಭು ನಿಲಾರಿ, ಸಂತೋಷ ಹವಾಲ್ದಾರ್, ಶಂಕರಗೌಡ ಪಾಟೀಲ, ಇಮಾಮಸಾಬ ಅಂಬಿ, ಲಿಯಾಕತ್ ಪಕಾಲಿ ಇದ್ದರು. ಮೀರಾ ತಟಗಾರ ಲಕ್ಷ್ಮಣ ಕಿಶೋರ್ ನಿರೂಪಿಸಿ, ಎಸ್ ಡಿ ಮಾಗಿ ಸ್ವಾಗತಿಸಿ, ಮಹಾಂತೇಶ ಫನಸಲಕರ ವಂದಿಸಿದರು. 


ಸುದ್ದಿ ಓದಿ