ಜಂತರ್ ಮಂತರ್‌ನಲ್ಲಿ ರೈತ ಪ್ರತಿಭಟನೆ ಬೆಂಬಲಿಸಲು ಪ್ರತಿಕ್ಷ ನಾಯಕರ ಕಾರ್ಯತಂತ್ರ ಸಭೆ
ನವದೆಹಲಿ, ಆಗಸ್ಟ್ 06 ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ವಿಪಕ್ಷ ನಾಯಕರು ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ.
'ಪೆಗಾಸಸ್ ಸ್ನ್ಯೂಪಿಂಗ್' ವಿವಾದ ಮತ್ತು ಇತರ ವಿಷಯಗಳ ಕುರಿತು ಸಂಸತ್ತಿನಲ್ಲಿ ಸ್ತಬ್ಧತೆ ಮುಂದುವರಿದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕರು ಶುಕ್ರವಾರ ಬೆಳಿಗ್ಗೆ ಮತ್ತೊಂದು ಕಾರ್ಯತಂತ್ರದ ಸಭೆ ನಡೆಸಿದರು.
ಇತರ ವಿರೋಧ ಪಕ್ಷಗಳ 13 ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಹಾಜರಿದ್ದರು. ರಾಹುಲ್ ಮತ್ತು ಇತರ ವಿರೋಧ ಪಕ್ಷದ ನಾಯಕರು ನಂತರ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಸೇರುತ್ತಾರೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಡಿಎಂಕೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಎನ್ ಸಿಪಿ, ಶಿವಸೇನೆ, ಆರ್ ಜೆಡಿ, ಸಮಾಜವಾದಿ ಪಕ್ಷ, ಸಿಪಿಐ-ಎಂ, ಎಎಪಿ, ಸಿಪಿಐ, ಐಯುಎಂಎಲ್, ಆರ್ ಎಸ್ ಪಿ, ಎನ್ ಸಿ ಮತ್ತು ಎಲ್ ಜೆಡಿ ಸೇರಿವೆ. ವಿರೋಧ ಪಕ್ಷಗಳು 'ಪೆಗಾಸಸ್', ಕೃಷಿ ಕಾನೂನುಗಳು, ಬೆಲೆ ಏರಿಕೆ ಮತ್ತು ಇತರ ಸಮಸ್ಯೆಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತಿರುವುದರಿಂದ ಇದು ಈ ವಾರ ಎರಡನೇ ಕಾರ್ಯತಂತ್ರದ ಸಭೆಯಾಗಿದೆ.
ಏತನ್ಮಧ್ಯೆ, ಟಿಎಂಸಿಯ ಸಂಸದರಾದ ಪ್ರಸೂನ್ ಬ್ಯಾನರ್ಜಿ, ಡೋಲಾ ಸೇನ್ ಮತ್ತು ಅಪರೂಪಾ ಪೊದ್ದರ್ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.