ರಾಮದುರ್ಗ

ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ರಾಮದುರ್ಗ ನವೆಂಬರ್ 28: 2014ರ ನನ್ನ ಅವಧಿಯಲ್ಲಿ ಮಂಜೂರ ಮಾಡಿಸಿದ ಎಲ್ಲ ಶಾಲಾ ಮತ್ತು ಕಾಲೇಜುಗಳ ನೂತನ ಕಟ್ಟಡಗಳಿಗೆ ಹಣ ಬಿಡುಗಡೆ ಮಾಡಿ ಈ ನನ್ನ ಅವಧಿಯಲ್ಲಿಯೇ ಉದ್ಘಾಟಿಸಿದ ಹೆಮ್ಮೆ ನನಗೆ ಇದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ನುಡಿದರು.

ತಾಲೂಕಿನ  ಸುರೇಬಾನ ಪದವಿ ಪೂರ್ವ ಮಹಾವಿದ್ಯಾಲಯಕ್ಕೆ 7 ಹೆಚ್ಚುವರಿ ಕೊಠಡಿಗಳಿಗೆ ಭೂಮಿ ಪೂಜೆ ಹಾಗೂ ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಖಾಸಗಿ ಶಾಲೆಗಳ ಡೊನೇಶನಿಂದ ತತ್ತರಿಸಿ ಬಡ ವಿದ್ಯಾಥರ್ಿಗಳಿಗೆ ನೆರವಾಗಲು ಸರಕಾರಿ ಶಾಲೆಗಳು ಪಮುಖ ಪಾತ್ರ ವಹಿಸುತ್ತದೆ. 

ಖಾಸಗಿ ಶಾಲೆ ಕಾಲೇಜುಗಳಲ್ಲಿ ಲಭ್ಯವಿದ್ದ ಸೌಲಭ್ಯಗಳನ್ನು ಎಲ್ಲ ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ನೀಡಲು ಶ್ರಮಿಸಿದ್ದೇನೆ, ಉಳಿದ ಕೆಲಸಗಳನ್ನು ನೀಡಿಲು ನಾನು ಸದಾ ಸಿದ್ಧ, ಹಾಗೇ ಸರಕಾರಿ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದವು ಖಾಸಗಿ ಶಾಲೆಗಳಲ್ಲಿ ದೊರೆತ ಶಿಕ್ಷಣಕ್ಕಿಂತಲೂ ಉತ್ತಮ ಗುಣಾತ್ಮಕ ಶಿಕ್ಷಣ ನೀಡಲು ಶ್ರಮಿಸಬೇಕು ಎಂದು ಮನವಿ ಮಾಡಿದರು. ಹೆಚ್ಚುವರಿಯಾಗಿ 7 ಕೊಠಡಿಗಳ ಕಾಮಗಾರಿ ಗುಣಾತ್ಮಕವಾಗಲು ಗ್ರಾಮಸ್ಥರು ಪದೆ ಪದೆ ಭೇಟಿ ನೀಡಿ ಇಲಾಖೆ  ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಮಹಾವಿದ್ಯಾಲಯಕ್ಕೆ ವಿದ್ಯತ ಸಂಪರ್ಕ, ಕುಡಿಯುವ ನೀರು ಹಾಗೂ ನೈಸಗರ್ಿಕ ಕರೆಗಳ ಗೃಹಗಳನ್ನು ಶೀಘ್ರದಲ್ಲಿಯೇ ಮಂಜೂರ ಮಾಡಿಸಿಬೇಕು ಎಂದು ಶಿವಾನಂದ ಗುರುಬಸನ್ನವರ ಶಾಸಕರಿಗೆ ಮನವಿ ಮಾಡಿದರು. ಎಪಿಎಮ್ಸಿ ಅಧ್ಯಕ್ಷ ದ್ಯಾವಪ್ಪ ಬೆಳವಡಿ, ಜಿಲ್ಲಾ ಪಂಚಾಯತ ಸದಸ್ಯರಾದ ಶಿವಕ್ಕಾ ಬೆಳವಡಿ, ಮಾರುತಿ ತುಪ್ಪದ ಜಿಪಂ ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ಎಮ್ ಐ ಕೊಳ್ಳಿ, ಸಹಾಯಕ ಅಭಿಯಂತರ ದಳವಾಯಿತ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 

 

ಸುದ್ದಿ ಓದಿ