ಅಮರನಾಥ್ ಯಾತ್ರೆಗೆ ಆರ್ಎಫ್ಐಡಿ ಅಳವಡಿಸಿದ ವಾಹನಗಳಿಗೆ ಮಾತ್ರ ಅನುಮತಿ: ಸಿಆರ್ಪಿಎಫ

ಅಮರನಾಥ್ ಯಾತ್ರೆಗೆ ಆರ್ಎಫ್ಐಡಿ ಅಳವಡಿಸಿದ ವಾಹನಗಳಿಗೆ ಮಾತ್ರ ಅನುಮತಿ: ಸಿಆರ್ಪಿಎಫ

 ಜಮ್ಮು, ಜುಲೈ 26  ನಗರದ ಯಾತ್ರಿ ಮೂಲ ಶಿಬಿರದಿಂದ ಯಾತ್ರಿಕರಿಗೆ  ತೊಂದರೆಯಿಲ್ಲದ ಪ್ರಯಾಣವನ್ನು ಒದಗಿಸುವ ದೃಷ್ಟಿಯಿಂದ ಕೇಂದ್ರೀಯ ಮೀಸಲು ಪೊಲೀಸ್ ಪಡೆ, ಸಿಆರ್ಪಿಎಫರ್ರ್ ಶುಕ್ರವಾರ ಹಿಮಾಲಯದ ದಕ್ಷಿಣದಲ್ಲಿರುವ ಶ್ರೀ ಅಮರನಾಥ ಗುಹಾಂತರ ದೇಗುಲಕ್ಕೆ ಕರೆದೊಯ್ಯುವ ವಾಹನಗಳಲ್ಲಿ ರೇಡಿಯೊ ತರಂಗಾಂತರ ದೃಡೀಕರಣ (ಆರ್ಎಫ್ಐಡಿ) ಅಳವಡಿಸುವ ಕಾರ್ಯವನ್ನು ಕೈಗೊಂಡಿದೆ.  

 'ನಾವು ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದೇವೆ, ಆರ್ಎಫ್ಐಡಿ ಸಹ ಇದರ ಭಾಗವಾಗಿದೆ.' ಎಂದು ಸಿಆರ್ಪಿಎಫ್ ನ ವಲಯ ಸಾರ್ವಜನಿಕ ಸಂಪರ್ಕಾಧಿಕಾರಿ, ಕಮಾಂಡೆಂಟ್ ಆಶಿಶ್ ಕುಮಾರ್ ಯಾತ್ರಿ ನಿವಾಸ್ ಶಿಬಿರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. 

 ಮರನಾಥ ಯಾತ್ರೆ ಬೆಂಗಾವಲಿನೊಂದಿಗೆ ಯಾವುದೇ ವಾಹನವನ್ನು ಆರ್ಎಫ್ಐಡಿ ಇಲ್ಲದೆ ಗುಹಾಂತರ ದೇಗುಲದ ಕಡೆಗೆ ಹೋಗಲು ಅನುಮತಿಸುವುದಿಲ್ಲ ಎಂದು ಅಶಿಷ್ ಕುಮಾರ್ ಹೇಳಿದರು, ಆರ್ಎಫ್ಐಡಿ ಹೊಂದಿರುವ ವಾಹನಗಳು ಚಾಲಕನ ಹೆಸರು, ನೋಂದಣಿ ಸಂಖ್ಯೆ, ಮೊಬೈಲ್ ಸಂಖ್ಯೆಗಳು ಮತ್ತು ಅಗತ್ಯವಿರುವ ದಾಖಲೆಗಳನ್ನು ಒಳಗೊಂಡಿರುತ್ತವೆ. ಎಂದು ಅವರು ಹೇಳಿದ್ದಾರೆ.'. 

 ' ಆರ್ಎಫ್ಐಡಿ ಅಳವಡಿಸುವುದರಿಂದ ಆಗುವ  ಪ್ರಯೋಜನವೆಂದರೆ, ಯಾವುದೇ ವಾಹನ  ಬೆಂಗಾವಲಿನೊಂದಿಗೆ ಹೊರಟಾಗ ಅಪಘಾತ, ಎಲ್ಲವೇ ಆಪತ್ತಿಗೆ ಸಿಲುಕಿಕೊಂಡಾಗ ಸಿಆರ್ಪಿಎಫ್ ತಂಡಗಳು ನಿಯಂತ್ರಣ ಕೊಠಡಿಯಲ್ಲಿ ವಾಹನದ ಚಲನವಲನಗಳನ್ನು ಮೇಲ್ವಿಚಾರಣೆ ಮಾಡುತ್ತವೆ,' ಎಂದು ಅವರು ಹೇಳಿದ್ದಾರೆ.   

ಯಾತ್ರಿ ನಿವಾಸ್ಗೆ ಬಾರದ ವಾಹನಗಳಿಗೆ ಲಖನ್ಪುರ, ಜಮ್ಮು ತಾವಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ಬಾನ್ ಟೋಲ್ ಪ್ಲಾಜಾ, ಉಧಂಪುರ ಮತ್ತು ನಶ್ರಿ ಸುರಂಗಗಳಲ್ಲಿ ಆರ್ಎಫ್ಐಡಿ ಟ್ಯಾಗ್ಗಳನ್ನು ಅಳವಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಸುದ್ದಿ ಓದಿ