ನಡುರಸ್ತೆಯಲ್ಲಿ ಹೊತ್ತಿ ಉರಿದ ತೆಂಗಿನಕಾಯಿ ತುಂಬಿದ್ದ ಲಾರಿ : ಲಕ್ಷಾಂತರ ರೂ. ಹಾನಿ

ನಡುರಸ್ತೆಯಲ್ಲಿ ಹೊತ್ತಿ ಉರಿದ ತೆಂಗಿನಕಾಯಿ ತುಂಬಿದ್ದ ಲಾರಿ : ಲಕ್ಷಾಂತರ ರೂ. ಹಾನಿ

ಬೆಳಗಾವಿ, ಜ, 14 : ತೆಂಗಿನಕಾಯಿ ತುಂಬಿಕೊಂಡು ನಿಂತಿದ್ದ ಲಾರಿಯೊಂದಕ್ಕೆ ಬೆಂಕಿ ತಗುಲಿದ ಹಿನ್ನೆಲೆಯಲ್ಲಿ ಲಾರಿ ಹಾಗೂ ಅದರಲ್ಲಿನ ತೆಂಗು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಕಿತ್ತೂರು ಬಳಿ ಇಂದು ನಡೆದಿದೆ.

      ಜಿಲ್ಲೆಯ ಕಿತ್ತೂರು ಬಳಿ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ತೆಂಗಿನಕಾಯಿ ತುಂಬಿಕೊಂಡ ಬಂದಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಶನಿವಾರ ಕಿತ್ತೂರು ತಾಲೂಕಿನ ಶಿವಾ ಪೆಟ್ರೋಲ್ ಪಂಪ್ ಬಳಿ ಈ ಘಟನೆ ನಡೆದಿದೆ. ಘಟನೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಸುದ್ದಿ ಓದಿ