ಯರಗಟ್ಟಿ ತಾಲೂಕಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಚಾಕು ಇರಿದು ವಿದ್ಯಾರ್ಥಿಯ ಹತ್ಯೆ : ಮೂವರು ಆರೋಪಿತರು ವಶಕ್ಕೆ, ವೈಯಕ್ತಿಕ ವೈಷಮ್ಯ ಹತ್ಯೆಗೆ ಕಾರಣ?

ಯರಗಟ್ಟಿ ತಾಲೂಕಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಚಾಕು ಇರಿದು ವಿದ್ಯಾರ್ಥಿಯ ಹತ್ಯೆ : ಮೂವರು ಆರೋಪಿತರು ವಶಕ್ಕೆ, ವೈಯಕ್ತಿಕ ವೈಷಮ್ಯ ಹತ್ಯೆಗೆ ಕಾರಣ?

ಬೆಳಗಾವಿ, ಸೆ, 11 : ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಕಾಲೇಜು ವಿದ್ಯಾರ್ಥಿ ಯೋರ್ವನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳನಲ್ಲಿ ನಡೆದಿದೆ.

    ಮುಗಳಿಹಾಳ ಗ್ರಾಮದಲ್ಲಿ 11 ದಿನಗಳ ನಂತರದ ಸಾರ್ವಜನಿಕ ಗಣಪತಿ ಮೂರ್ತಿ ಗಳ ವಿಸರ್ಜನೆ ಕಾಲಕ್ಕೆ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳಲ್ಲಿ ಗಲಾಟೆ ನಡೆದು, ಅದರಲ್ಲಿ ಓರ್ವ ವಿದ್ಯಾರ್ಥಿಯಾದ ಅರ್ಜುನ ಗೌಡಾ (20), ಎನ್ನುವನಿಗೆ ಚಾಕು ಇರಿಯಾಗಿದೆ. ಇದರಿಂದ ಕುಸಿದು ಬಿದ್ದ ಅರ್ಜುನ ಗೌಡಾ ಈತ ಮೃತಪಟ್ಟಿದ್ದಾನೆ. 

     ಈ ಕೊಲೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಈ ಕೊಲೆಗೆ ವಿದ್ಯಾರ್ಥಿಗಳ ವೈಯಕ್ತಿಕ ವಿಚಾರದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುದ್ದಿ ಓದಿ