ರಾಯಬಾಗ ತಾಲೂಕಿನ ಬಾವನ ಸೌದತ್ತಿಯಲ್ಲಿ ಎಟಿಎಮ್ ಕಳ್ಳತನಕ್ಕೆ ಯತ್ನಿಸಿದ್ದ ಓರ್ವ ಆರೋಪಿಯನ್ನು ಬಂಧಿಸಿದ ಪೊಲೀಸರು
ಬೆಳಗಾವಿ, ಸೆ, 29 : ಜಿಲ್ಲೆಯ ರಾಯಬಾಗ ತಾಲೂಕಿನ ಬಾವನ ಸೌದತ್ತಿಯಲ್ಲಿ ಎಟಿಎಮ್ ಕಳ್ಳತನಕ್ಕೆ ನಡೆಸಿದ್ದ ವಿಫಲ ಯತ್ನ ನಡೆಸಿದ್ದ ಓರ್ವ ಆರೋಪಿತನನ್ನು ರಾಯಬಾಗ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಯಬಾಗ ತಾಲೂಕಿನ ಬಾವನ ಸೌದತ್ತಿಯ ಗ್ರಾಮದಲ್ಲಿನ ಎಟಿಎಮ್ ಮಷೀನ್ ನಲ್ಲಿನ ಹಣ ಕಳ್ಳತನಕ್ಕೆ ಯತ್ನ ನಡೆಸಿದ್ದ ಖಾಜಾಸಾಬ್ ಬಾಬಾಸಾಬ್ ಮುಜಾವರ ಎಂಬುವ ಓರ್ವ ಆರೋಪಿತನನ್ನು ರಾಯಬಾಗ ಪೊಲೀಸರು ಬಂಧಿಸಿದ್ದಾರೆ.

ಕಳೆದ ಪೆಬ್ರವರಿ ತಿಂಗಳಲ್ಲಿ ಬಾವನ ಸೌದತ್ತಿ ಗ್ರಾಮದಲ್ಲಿನ ಕೆನರಾ ಬ್ಯಾಂಕ್ ಶಾಖೆಯ ಎಟಿಎಮ್ ನಲ್ಲಿ ರಾತ್ರಿ ಕಳ್ಳತನಕ್ಕೆ ಯತ್ನಿಸಿದ್ದನು. ಈ ಪ್ರಕರಣ ವನ್ನು ಭೇದಿಸಿದ ರಾಯಬಾಗ ಸಿಪಿಐ ಎಚ್.ಡಿ.ಮುಲ್ಲಾ ಹಾಗೂ ತಂಡವು ಈ ಕಳ್ಳತನ ಪ್ರಕರಣದ ಆರೋಪಿ ಖಾಜಾಸಾಬ್ ಈತನನ್ನು ಬಲೆಗೆ ಬಿಳಿಸುಬಲ್ಲಿ ಯಶಸ್ವಿಯಾಗಿದೆ.