ರಾಮನವಮಿ ನಿಮಿತ್ತ, ರಾಮನ ತೊಟ್ಟಿಲೋತ್ಸವ: ಪಾಲಕಿ ಉತ್ಸವ
ರಾಣೆಬೆನ್ನೂರು 28 ; ಇಲ್ಲಿನ ಸಂಗಂ ವೃತ್ತದಲ್ಲಿನ ಶ್ರೀರಾಮ ಮಂದಿರದಲ್ಲಿ, ಸಾವಿರಾರು ಭಕ್ತರು ರಾಮ ನವಮಿ ನಿಮಿತ್ತ ವಾಗಿ, ಅತ್ಯಂತ ಭಕ್ತಿ ಭಾವದೊಂದಿಗೆ ರಾಮನವಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪ್ರತಿ ವರ್ಷದ ಸಂಪ್ರದಾಯದಂತೆ ಮೆಹರವಾಡೆ ಕುಟುಂಬದವರು, ಸಮಾವೇಶಗೊಂಡು, ಬೆಳಿಗ್ಗೆಯಿಂದಲೇ ವಿವಿಧ ರೀತಿಯ ಪೂಜೆ ಪುನಸ್ಕಾರಗಳ ಮೂಲಕ, ಶ್ರೀರಾಮನಿಗೆ ತೊಟ್ಟಿಲೋತ್ಸವ ನೆರವೇರಿಸಿ ಸಂಭ್ರಮಿಸಿದರು. ಮಹಿಳೆಯರು ನಿಯಮಿತವಾಗಿ ನೂರಾರು ಮಹಿಳೆಯರಿಗೆ, ಅರಿಶಿನ ಕುಂಕುಮ, ಫಲ ಪುಷ್ಪ ಸಮರ್ಿಸಿ ಆಶೀರ್ವಾದ ಪಡೆದದು, ಧನ್ಯತೆ ಮೆರೆದರು. ನಂತರ ಪಾಲಕಿಉತ್ಸವ ನಡೆಯಿತು, ಪಾಲ್ಗೊಂಡ ಸಹಸ್ರಾರು ಭಕ್ತರಿಗೆ ಪಾನಕ ಮತ್ತು ಪ್ರಸಾದ ವಿತರಿಸಲಾಯಿತು. ಮೆಹರವಾಡೆ ಕುಟುಂಬದವರಾದ ಮನೋಹರ ಮೆಹರವಾಡೆ, ರಾಜೇಂದ್ರಶಾ ಇರಕಲ್, ಚೇತನ್ ಮೆಹರವಾಡೆ, ಸೇರಿದಂತೆ ಮತ್ತಿತರ ಗಣ್ಯರು ಸಾರ್ವಜನಿಕರು ಭಕ್ತರು ಪಾಲ್ಗೊಂಡಿದ್ದರು.