15ರಂದು ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವ
ಇಂಡಿ 07: ತಾಲೂಕಿನ ಇಂಗಳಗಿ ಗ್ರಾಮದ ಧರ್ಮರ ದೇವರ ಶ್ರೀ ಮರುಳಸಿದ್ದೇಶ್ವರ ಜಾತ್ರಾ ಮಹೋತ್ಸವ ಮಾರ್ಚ 15ರಂದು ಸೋಮವಾರರಂದು ನಡೆಯಲಿದೆ.ಅಂದು ಬೆಳಿಗ್ಗೆ ಶ್ರೀ ಮರುಳಸಿದ್ದೇಶ್ವರ ಕರ್ತೃ ಗದ್ದುಗೆಗೆ ಅಭಿಷೇಕ, ಸಾ. 6:00 ಘಂಟೆಗೆ ಗಂಗೆ ಸೀತಾಳ, ರಾತ್ರಿ 8:00 ಘಂಟೆಗೆ ದೇವರಿಗೆ ವಿಶೇಷ ಅಭಿಷೇಕ ನಡೆಯಲಿದೆ. ತದನಂತರ ನುಡಿಮುತ್ತು (ದೇವರ ಹೇಳಿಕೆ) ಕಾರ್ಯಕ್ರಮವಿದ್ದು ರಾತ್ರಿ 9:00 ಘಂಟೆಗೆ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ.ಇಂಡಿಯ ಬಲವಂತ ಇಂಗಳೆ ಮತ್ತು ಸಾತಪೂರದ ಶಿವಪ್ಪ ಗುಡ್ಲ ಅವರಿಂದ ಸಾಯಂಕಾಲ 6:00 ಘಂಟೆಯಿಂದ ರಾತ್ರಿ 9:00 ಘಂಟೆಯವರೆಗೆ ಹಂತಿಪದಗಳು ಜರುಗಲಿದ್ದು, ಅದೇ ದಿನ ರಾತ್ರಿ 10 ಘಂಟೆಗೆ ಸರಿಯಾಗಿ ಅಥಣಿ ತಾಲೂಕಿನ ಬಾಳಿಗೇರಿಯ ಚಂದ್ರಕಾಂತ ಗುರಪ್ಪ ನಾಟೀಕಾರ, ವಿದ್ಯಾವತಿ ಮಸಬಿನಾಳ ಅವರಿಂದ ಸುಪ್ರಸಿಧ್ಧ ಗೀಗೀ ಪದಗಳು ಜರುಗಲಿವೆ.