ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಅಧಿಕಾರಿ ರಾಮಣ್ಣ ಚಾಲನೆ
ಕುಕನೂರ 07: ಪಟ್ಟಣದ ಮೂಡಬಿದರೆ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಡ್ರಮ್ ಸೆಟ್ ಬಾರಿಸುವ ಮೂಲಕ ಕಾರ್ಯನಿರ್ವಾಹಕ ಅಧಿಕಾರಿ ರಾಮಣ್ಣ ದೊಡ್ಮನಿ ಸರ್ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿಗಳು, ಮತದಾನ ಒಂದು ನಮ್ಮ ಸಂವಿಧಾನ ನೀಡಿರುವ ಒಂದು *ಹಕ್ಕು ಮತ್ತು ವರ* ಯಾರೂ ಕೂಡಾ ಯಾವುದೇ ಆಮಿಷಕ್ಕೆ ಓಳಗಾಗದೇ ಮೇ.10 ರಂದು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು. 18 ವರ್ಷ ಮೇಲ್ಪಟ್ಟವರು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡಿಸಲು ಎಪ್ರೀಲ್-11 ರ ವರೆಗೆ ಚುನಾವಣೆ ಆಯೋಗ ಅವಕಾಶ ಕೊಟ್ಟಿದೆ ಇನ್ನೂ ಹೆಸರು ಸೆರ್ಪಡೆಗೆ ಬಾಕಿ ಇರುವವರು ಹೆಸರನ್ನು ನೊಂದಣಿ ಮಾಡಿಕೊಳ್ಳಲು ಕರೆ ನೀಡಿದರು.
ವಿಶೇಷ ಚೇತನರು ಮತ್ತು 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗಿದೆ ಇದರಿಂದಾಗಿ ಈ ಬಾರಿ ಚುನಾವಣೆಯಲ್ಲಿ ಶೇ. 100 ಮತದಾನದ ಗುರಿ ಹೊಂದಲಾಗಿದರ ಎಂದರು.
ಸ್ಥಳದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ಪ್ರಕಾಶ ಬಾಗಲೆ, ಆರೋಗ್ಯ ಅಧಿಕಾರಿಗಳಾದ ರಾಜೇಶ್ವರಿ, ಬಸವರಾಜ ಆರಬೇರಳಿನ್, ಸಿಬ್ಬಂದಿ ವರ್ಗದವರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು