ಉತ್ತರ ಕೊರಿಯಾದಲ್ಲಿ ಅಣು ರಿಯಾಕ್ಟರ್ ಪುನಾರಂಭ ಶಂಕೆ
ಪ್ಯೋಂಗ್ಯಾಂಗ್, ಆ30: ಉತ್ತರ ಕೊರಿಯಾ ತನ್ನ ಯೊಂಗ್‌ಬಿಯಾನ್ ಪರಮಾಣು ರಿಯಾಕ್ಟರ್ ಅನ್ನು ರಹಸ್ಯವಾಗಿ ಮರುಪ್ರಾರಂಭಿಸಿದೆ ಎಂದು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ಯ ಭಾನುವಾರ ತಿಳಿಸಿದೆ.
ಉತ್ತರ ಕೊರಿಯಾ ರಿಯಾಕ್ಟರ್ ಪರಮಾಣು ಶಸ್ತ್ರಾಸ್ತ್ರಗಳಿಗೆ ಬಳಸಲು ಪ್ಲುಟೋನಿಯಂ ಉತ್ಪಾದಿಸುತ್ತದೆ ಎನ್ನಲಾಗುತ್ತಿದೆ.
2009ರಲ್ಲಿ ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಇಂಟರ್ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ-ಐಎಇಎ) ಅನ್ನು ಪ್ಯೊಂಗ್ಯಾಂಗ್ ನಿಂದ ಹೊರಹಾಕಲಾಗಿತ್ತು. ಈಗ ಇದರ ಮೌಲ್ಯಮಾಪನ ಮಾಡಲು ಉಪಗ್ರಹ ಚಿತ್ರಣವನ್ನು ಅವಲಂಬಿಸಲಾಗುತ್ತಿದೆ.
ಅದರ ಇತ್ತೀಚಿನ ವರದಿಯ ಪ್ರಕಾರ, ಜುಲೈ ಆರಂಭದಿಂದ ಅಲ್ಲಿ ನಡೆಯುತ್ತಿರುವ ಚಟುವಟಿಕೆಗಳೂ "ರಿಯಾಕ್ಟರ್ ಕಾರ್ಯಾಚರಣೆ"ಗೆ ಅನುಗುಣವಾಗಿವೆ ಎಂದು ಐಎಇಎ ತಿಳಿಸಿದೆ.