ಸಂಪುಟದಲ್ಲಿ ಎಲ್ಲರಿಗೂ ಸಚಿವಸ್ಥಾನ ಸಿಗಲೂ ಸಾಧ್ಯವಿಲ್ಲ:ರವಿಕುಮಾರ್

ಸಂಪುಟದಲ್ಲಿ ಎಲ್ಲರಿಗೂ ಸಚಿವಸ್ಥಾನ ಸಿಗಲೂ ಸಾಧ್ಯವಿಲ್ಲ:ರವಿಕುಮಾರ್

ಬೆಂಗಳೂರು,ಆ.2 ಸಂಪುಟದಲ್ಲಿ ಸಚಿವ ಸ್ಥಾನ ಎಲ್ಲರಿಗೂ ಸಿಗಲೂ ಅವಕಾಶವಿಲ್ಲ.ನಾನು ಹೋರಾಟದ ಮೂಲಕವೇ ಬಂದವನಾಗಿದ್ದು, ಸಂಘ ಪರಿವಾರದಿಂದ ಬಂದವರನ್ನು ಗುರುತಿಸಲಾಗುತ್ತದೆ.ನನಗೆ ಸಚಿವ ಕೊಟ್ಟರೂ ಸರಿ,ಕೊಡದಿದ್ದರೂ ನೋವಿಲ್ಲ ಎಂದು ಬಿಜೆಪಿ ಪ್ರಧಾನಕಾರ್ಯದರ್ಶಿ ಮೇಲ್ಮನೆ ಸದಸ್ಯ ರವಿಕುಮಾರ್ ಮಾರ್ಮಿಕವಾಗಿ ನುಡಿದಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾನೊಬ್ನ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು,ಪಕ್ಷ ನಿಷ್ಠಾವಂತರನ್ನು ಪಕ್ಷ ಗುರುತಿಸುತ್ತದೆ
ಇವತ್ತು ನನ್ನ ಪರ ಸ್ವಾಮೀಜಿಗಳು ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ.ಸ್ವಾಮೀಜಿಗಳು ಕೇಳಿರುವುದರಲ್ಲಿ ತಪ್ಪೇನಿಲ್ಲ.ಬೇರೆ ಬೇರೆ ಸ್ವಾಮೀಜಿಗಳು ಕೇಳಿದ್ದಾರೆ
ನನಗೂ ಕೊಟ್ಟರೂ ಸಂತೋಷ,ಕೊಡದಿದ್ದರೂ ಸಂತೋಷ ಎಂದರು.

ಸುದ್ದಿ ಓದಿ