ಉತ್ತರ ಬ್ರೆಜಿಲ್‌ : ವಿದ್ಯುತ್ ಟವರ್ ಉರುಳಿ 7 ಜನರ ಸಾವು

ಉತ್ತರ ಬ್ರೆಜಿಲ್‌ : ವಿದ್ಯುತ್ ಟವರ್ ಉರುಳಿ 7 ಜನರ ಸಾವು

  ರಿಯೊ ಡಿ ಜನೈರೊ, ಜುಲೈ 17  ಉತ್ತರ ಬ್ರೆಜಿಲ್ ನ ಪ್ಯಾರಾದಲ್ಲಿ ವಿದ್ಯುತ್ ತಂತಿ ಸಾಗಿಸುವ ಹೈಡ್ರೋ ಟವರ್ ಉರುಳಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪೈಲನ್ ಬಿದ್ದಾಗ ಸ್ಥಳದಲ್ಲಿಯೇ ಆರು ಜನರು ಮೃತಪಟ್ಟಿದ್ದು, ಇನ್ನೊಬ್ಬ ವ್ಯಕ್ತಿ ನಂತರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಜಿ 1 ಬ್ರಾಡ್ ಕಾಸ್ಟರ್  ಶುಕ್ರವಾರ ವರದಿ ಮಾಡಿದೆ.
    ಇನ್ನುಳಿದ ಐದು ಜನರು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪಕಾಜಾ ಪುರಸಭೆಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕಾರಣಗಳು ಇನ್ನೂ ತಿಳಿದಿಲ್ಲ.

ಸುದ್ದಿ ಓದಿ