ಅಂತರರಾಷ್ಟ್ರೀಯ

ಮೂವರು ಭೌತ ವಿಜ್ಞಾನಿಗಳಿಗೆ ನೊಬೆಲ್ ಪುರಸ್ಕಾರ

ಮೂವರು  ಭೌತ ವಿಜ್ಞಾನಿಗಳಿಗೆ  ನೊಬೆಲ್  ಪುರಸ್ಕಾರ

ಸ್ಟಾಕ್ ಹೋಂ, ಅಕ್ಟೋಬರ್ 6:  ಭೌತ ಶಾಸ್ತ್ರದಲ್ಲಿ  ವಿಶೇಷ  ಸಂಶೋಧನೆ ನಡೆಸಿದ  ಮೂವರು  ವಿಜ್ಞಾನಿಗಳಿಗೆ  2020ನೇ  ಸಾಲಿನ  ನೊಬೆಲ್  ಪುರಸ್ಕಾರ ಲಭಿಸಿದೆ.

ಕಪ್ಪು ಕುಳಿಗೆ  ಸಂಬಂಧಿಸಿದ ಸಂಶೋಧನೆ ನಡೆಸಿದ ಅಮೆರಿಕದ ಪ್ರಾಧ್ಯಾಪಕ ಆಂಡ್ರಿಯಾ ಗೆಜ್,  ಬ್ರಿಟಿಷ್ ವಿಜ್ಞಾನಿ ರೋಜರ್ ಪೆನ್ರೋಸ್ ,   ಜರ್ಮನ್ ವಿಜ್ಞಾನಿ ರೀನ್ಹಾರ್ಡ್ ಜೆನ್ಜೆಲ್   ಅವರನ್ನು ನೊಬೆಲ್ ಸಮಿತಿ ಮಂಗಳವಾರ   ಪುರಸ್ಕಾರಕ್ಕೆ ನಾಮ ನಿರ್ದೇಶನ ಮಾಡಿದೆ. 

ಪ್ರಶಸ್ತಿ   ಚಿನ್ನದ ಪದಕ  ಹಾಗೂ  ಒಂದು ಕೋಟಿ ಸ್ವೀಡಿಷ್ ಕ್ರೋನರ್ (8.22 ಕೋಟಿ ರೂ.) ನಗದು ಬಹುಮಾನ  ಒಳಗೊಂಡಿದೆ.  ರೋಜರ್ ಪೆನ್ರೋಸ್ ಅರ್ಧದಷ್ಟು ಬಹುಮಾನವನ್ನು ಪಡೆದರೆ, ರೀನ್ಹಾರ್ಡ್ ಮತ್ತು ಆಂಡ್ರಿಯಾ ಉಳಿದ ಅರ್ಧವನ್ನು ಹಂಚಿಕೊಳ್ಳಲಿದ್ದಾರೆ.

ಸುದ್ದಿ ಓದಿ