ನಿಪ್ಪಾಣಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಚಿನ್ನದ ವ್ಯಾಪಾರಿಯಿಂದ ಚಿನ್ನಾಭರಣ ಎಗ್ಗರಿಸಿ ಫರಾರಿಯಾಗಿದ್ದ ನಾಲ್ವರು ಖದೀಮರ ಬಂಧನ, 6.5 ಲಕ್ಷ ಸ್ವತ್ತು ವಶ

ನಿಪ್ಪಾಣಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ : ಚಿನ್ನದ ವ್ಯಾಪಾರಿಯಿಂದ ಚಿನ್ನಾಭರಣ ಎಗ್ಗರಿಸಿ ಫರಾರಿಯಾಗಿದ್ದ ನಾಲ್ವರು ಖದೀಮರ ಬಂಧನ, 6.5 ಲಕ್ಷ ಸ್ವತ್ತು ವಶ

ಬೆಳಗಾವಿ, ಅ, 8 : ನಡುರಸ್ತೆಯಲ್ಲಿ ಚಿನ್ನದ ವ್ಯಾಪಾರಿಯೊಬ್ಬರನ್ನು ತಡೆದು ಆತನ ಮೇಲೆ ಹಲ್ಲೆ ನಡೆಸಿ 25 ಗ್ರಾಂ ಚಿನ್ನದ ಆಭರಣ ಮತ್ತು 2.5 ಕೆಜಿ ಬೆಳ್ಳಿ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ನಾಲ್ಬರು ಖದೀಮರನ್ನು ಬಂಧಿಸುವಲ್ಲಿ ಜಿಲ್ಲೆಯ ನಿಪ್ಪಾಣಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಪಡಿಕೊಂಡಿದ್ದಾರೆ.


     ಕಳೆದ ಏಪ್ರಿಲ್ 9ರಂದು ನಿಪ್ಪಾಣಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ವ್ಯಾಪಾರಿ ಹಾಗೂ ಮಾಂಗೂರ ಗ್ರಾಮದ ನಿವಾಸಿ ದೊಂಡಿರಾಮ ವಿಷ್ಣು ಕಂಸಾಳೆ ಎಂಬುವರು ಮೇಲೆ ಈ ನಾಲ್ವರು ಖದೀಮರು ಹಲ್ಲೆ ಮಾಡಿ ಸುಮಾರು 5.40 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2.5 ಕೆಜಿ ತೂಕದ ಬೆಳ್ಳಿಯ ಆಭರಣವನ್ನು ದೋಚಿ ಫರಾರಿಯಾಗಿದ್ದದ್ದರು. ಈ ಕುರಿತು ತಮ್ಮ ಮೇಲೆ ನಡೆದ ಹಲ್ಲೆ ಹಾಗೂ ಚಿನ್ನಾಭರಣ ಕಳುವಾದ ಬಗ್ಗೆ ವಿಷ್ಣು ಅವರು ನಿಪ್ಪಾಣಿ ಗ್ರಾಮೀಣ ಪೊಲೀಸ ಠಾಣೆಗೆ ದೂರು ನೀಡಿದ್ದರು.

   ಭೀವಶಿ ಗ್ರಾಮದ ಹದ್ದಿನಲ್ಲಿ ದ್ವಿಚಕ್ರ ವಾಹನ ಮೇಲೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿ ಮೋಟರ್ ಬೈಕಿನಲ್ಲಿ ಬಂದ ಮೂವರು ತಮ್ಮ ಮೇಲೆ ಹಲ್ಲೆ ನಡೆಸಿ ಕೈಯಲ್ಲಿದ್ದ ಚಿನ್ನಾಭರಣದ ಬ್ಯಾಗ್ ಕದ್ದೊಯ್ದ ಬಗ್ಗೆ ದೂರಿನಲ್ಲಿ ತಿಳಿಸಲಾಗಿತ್ತು. 

  ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಡಿಎಸ್‍ಪಿ ಬಸವರಾಜ ಯಲಿಗಾರ ಅವರ ಮಾರ್ಗದರ್ಶನದಲ್ಲಿ ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ಅವರ ನೇತೃತ್ವದಲ್ಲಿ ಪಿಎಸ್‍ಐ ಅನಿಲ ಕಂಬಾರ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆಗೆ ಮುಂದಾಗಿದ್ದರು.

   ತನಿಖೆಯ ವೇಳೆ 2 ಬೈಕಿನಲ್ಲಿ 6 ಮಂದಿ ಪ್ರಕರಣದಲ್ಲಿ ಶಾಮೀಲಾಗಿರುವುದು ಕಂಡು ಬಂದಿತ್ತು. ಪ್ರಕರಣ ಬೇಧಿಸಿದ ಪೊಲೀಸರು ಇವರಲ್ಲಿ 4 ಮಂದಿಯನ್ನು ಕಂಬಿಯ ಹಿಂದೆ ನೂಕಿದ್ದು, ಆರೋಪಿಗಳಿಂದ 25 ಗ್ರಾಂ ಚಿನ್ನದ ಆಭರಣ, 2.5 ಬೆಳ್ಳಿಯ ಆಭರಣ, ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನ  ಸೇರಿದಂತೆ ಒಟ್ಟು 6.50 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗೆ ಬಲೆ ಬೀಸಲಾಗಿದೆ.

ನಿಪ್ಪಾಣಿ ಪೊಲೀಸರ ಈ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹಾಗೂ ಹೆಚ್ವುವರಿ  ಎಸ್ಪಿ ಮಹಾನಿಂಗ ನಂದಗಾವಿ ಅವರು ಪ್ರಶಂಸೆ ವ್ಯಕ್ತಪಡಿ ಈ ತಂಡವನ್ನು ಅಭಿನಂದಿಸಿದ್ದಾರೆ.



ಸುದ್ದಿ ಓದಿ