ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬೆಳಗಾವಿ : ಜಿಲ್ಲೆಯ ಹುಕ್ಕೇರಿ ತಾಲೂಕು ಬಾಡ ಗ್ರಾಮದ ಹಿರಿಯ ನಾಗರಿಕರಾಗಿದ್ದ ನಿಜಪ್ಪ ಶಿವಲಿಂಗ ಜಾಡರ್ (107) ಅವರು ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ 5:30 ಗಂಟೆಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ನಿಜಪ್ಪ ಜಾಡರ್ ಅವರು ಹುಕ್ಕೇರಿ ತಾಲೂಕಿನಲ್ಲೇ ಅತ್ಯಂತ ಹೆಚ್ಚು ವರ್ಷಗಳ ಕಾಲ ಬದುಕಿದ ಹಿರಿಯರಲ್ಲಿ ಒಬ್ಬರಾಗಿದ್ದು, ತಮ್ಮ ಸರಳತೆ ಹಾಗೂ ಆದರ್ಶ ಜೀವನದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಅವರು ತಮ್ಮ ಹಿಂದೆ 10 ಮಂದಿ ಮಕ್ಕಳು, 57 ಮಂದಿ ಮೊಮ್ಮಕ್ಕಳು ಸೇರಿದಂತೆ ಅಪಾರ ಕುಟುಂಬವನ್ನು ಅಗಲಿದ್ದಾರೆ. ಮೃತರು ಬೆಳಗಾವಿಯ ಛಾಯಾಚಿತ್ರಗಾರ ಸದಾಶಿವ ಸಂಗಪ್ಪಗೋಳ ಅವರ ಅಜ್ಜನಾಗಿದ್ದರು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು, ಬಂಧು-ಬಳಗ, ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಕುಟುಂಬದ ಸಂಪ್ರದಾಯದಂತೆ ನೆರವೇರಿತು.