ಸರ್ಕಲ್ ನಾಮಫಲಕ ಮರುಸ್ಥಾಪನಗೆ ಆಗ್ರಹಿಸಿ ಅಹೋರಾತ್ರಿ ಸತ್ಯಾಗ್ರಹ
ಲೋಕದರ್ಶನ ವರದಿ
ಮಹಾಲಿಂಗಪುರ 18: ಪಟ್ಟಣದಲ್ಲಿ ಪುರಸಭೆಯವರು ತೆರವುಗೊಳಿಸಿದ್ದ ಬೆಳವಡಿ ಯಲ್ಲಣ್ಣ ವಡ್ಡರ ವೃತ್ತ ಮರುಸ್ಥಾಪನೆಗೆ ಅಗ್ರಹಿಸಿ ಪುರಸಭೆ ಆವರಣದಲ್ಲಿ ಬೋವಿ ವಡ್ಡರ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅರ್ಜುನ್ ಬಂಡಿವಡ್ಡರ ತಮ್ಮ ಬೆಂಬಲಿಗರೊಂದಿಗೆ ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ 7ನೇ ದಿನ ಪೂರೈಸಿತು.
ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದ ಶಿವಯೋಗಿ ಸಿದ್ದರಾಮೇಶ್ವರ ಮಠದ ವಡ್ಡರ ಭೋವಿ ಪೀಠದ ಮಹಾಸ್ವಾಮಿಗಳು. ಸುಟ್ಟಟ್ಟಿಯ ಶಿವಯೋಗಿ ಸಿದ್ದರಾಮೇಶ್ವರ ಮಠದ ಚಂದ್ರಶೇಖರ ಮಹಾಸ್ವಾಮಿಗಳು ಸ್ವತಂತ್ರ ಸೇನಾನಿ ಬೆಳವಡಿ ಯಲ್ಲಣ್ಣ ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೋಳಿಹಾಳ ಹಣಮಂತ ವಡ್ಡರ ಕರ್ನಾಟಕ ರಾಜ್ಯ ಬೋವಿ ವಡ್ಡರ ಮಹಾಸಭಾ ಪ್ರಧಾನ ಕಾರ್ಯದರ್ಶಿ ವಿಠಲ ವಡ್ಡರ ಅವರು ಪುರಸಭೆ ಮುಖ್ಯಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿ ಮರುಸ್ಥಾಪನೆಗೆ ಒತ್ತಾಯಿಸಿದರು.
ಮಾ 2 ರಂದು ಯಲ್ಲಣ್ಣ ವಡ್ಡರ ವೃತ್ತ ನಿರ್ಮಿಸಿದ್ದರು ಅದೇ ದಿನ ಅದನ್ನು ಪೊಲೀಸರು ಮತ್ತು ಪುರಸಭೆಯವರು ಸೇರಿ ತೆರವುಗೋಳಿಸಿದ್ದರು ಮಾ 3 ರಂದು ಪುರಸಭೆ ಆವರಣದ ಮುಂದೆ ಪ್ರತಿಭಟನೆ ನಡೆಸಿದಾಗ ಮುಖ್ಯಾಧಿಕಾರಿ ಮರುಸ್ಥಾಪನೆಗೆ ಅವಕಾಶ ನೀಡಿದ ಬಳಿಕ ಶಾಸಕ ಸಿದ್ದು ಸವದಿ ಕೆಲ ಮುಖಂಡರು ಮರುಸ್ಥಾಪನೆ ಮಾಡಿದ್ದರು. ಜೂನ್ 11 ರಂದು ನಾಮಫಲಕವನ್ನು ಮತ್ತೆ ತೆರವುಗೊಳಿಸಲಾಗಿದೆ ಸಂಭಂದಪಟ್ಟವರನ್ನು ಸಂಪರ್ಕಿಸಿದರು ನಾಮಫಲಕ ತೇರುವಿನ ಹಿನ್ನಲೆ ತಿಳಿಯದ ಮತ್ತೆ ಮರುಸ್ಥಾಪನೆಗೆ ಸಮುದಾಯದವರು ಧರಣಿ ಕೈಗೊಂಡಿದ್ದಾರೆ.
ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಸೇವಾ ಸಂಘದ ಕಾರ್ಯದರ್ಶಿ ತಿಪ್ಪಣ್ಣ ಬಂಡಿವಡ್ಡರ ಚನ್ನಪ್ಪ ಬಂಡಿವಡ್ಡರ, ರಾಮು ಬಂಡಿವಡ್ಡರ, ರಾಜು ಬಂಡಿವಡ್ಡರ, ಪ್ರಭು ಬಂಡಿವಡ್ಡರ, ರಾಮು ಪಾತ್ರೋಟ, ಅಡಿವೆಪ್ಪ ಬಂಡ್ಡಿವಡ್ಡರ, ಶಶಿಕಾಂತ ಪಾತ್ರೋಟ, ಪ್ರಜ್ಜಲ್ ನಾಗನೂರ, ಮಲ್ಲೇಶ ಬಂಡಿವಡ್ಡರ, ಮಹಾಲಿಂಗ ಬಂಡಿವಡ್ಡರ, ಹೋರಾಟದಲ್ಲಿ ಭಾಗವಹಿಸಿದ್ದರು.