ನೂತನ ಸದಸ್ಯರಾದ ಅನಿಲ ಅಬ್ಬಿಗೇರಿ, ನಾಗರಾಜ ತಳವಾರಗೆ ಸನ್ಮಾನ

ನೂತನ ಸದಸ್ಯರಾದ ಅನಿಲ ಅಬ್ಬಿಗೇರಿ, ನಾಗರಾಜ ತಳವಾರಗೆ ಸನ್ಮಾನ

ಲೋಕದರ್ಶನ ವರದಿ 


ಗದಗ  31: ಗದಗ-ಬೆಟಗೇರಿ ನಗರಸಭೆ ವಾರ್ಡ ನಂ. 24ರ ನೂತನ ಸದಸ್ಯರಾದ ನಾಗರಾಜ ತಳವಾರ ಹಾಗೂ 28ನೇ ವಾರ್ಡಿನ ಸದಸ್ಯರಾದ ಅನೀಲ ಅಬ್ಬಿಗೇರಿ ಅವರುಗಳನ್ನು ನಗರದ ಸರಾಫ ಬಜಾರ ಲೈನದಲ್ಲಿರುವ ಅಂಬಾಭವಾನಿ ದೇವಸ್ಥಾನದಲ್ಲಿ ಗದಗ ಬೆಟಗೇರಿ ನಗರಸಭೆಯ ಹೊರಗುತ್ತಿಗೆ ವಾಹನ ಚಾಲಕರು ಮಲ್ಲಿಕಾರ್ಜುನ ಸಂಗಾಪೂರ ನೇತೃತ್ವದಲ್ಲಿ ಮತ್ತು ಮನೆ ಮನೆ ಕಸ ಸಂಗ್ರಹಿಸುವ ಸ್ವ ಸಹಾಯ ಸ್ತ್ರೀ ಗುಂಪದ ಮಹಿಳೆಯರು, ಪೌರ ಕಾರ್ಮಿಕರು ಹಾಗೂ ಲೋಡರ​‍್ಸ‌ ಹಾಗೂ ವಾರ್ಡಿನ ಸೂಪರವೈಜರ್‌ಗಳು ಸೇರಿಸಿಕೊಂಡು ಅತ್ಮೀಯ ಸನ್ಮಾನಿಸಿದರು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ. ವಾಯ್‌. ಮಟ್ಟಿಯವರು ವಹಿಸಿದ್ದರು. ನಗರಸಭೆ ಸೊಸೈಟಿಯ ಅಧ್ಯಕ್ಷರಾದ ಕೆಂಚಪ್ಪ ಪೂಜಾರ, ಸೂಪರವೈಜರ ಚಂದ್ರು ಹಾದಿಮನಿ, ವಾಹನ ಚಿದಾನಂದ ಮುಳಗುಂದ, ಕಿರಣ ಹಾದಿಮನಿ, ಪ್ರದೀಪ, ವಿಜಯ ಕಾಕಿ, ಮಂಜು ಮುಳುಗಂದ, ಶ್ಯಾಮ ಪೂಜಾರ, ಮಹಿಳೆಯರಾದ ಪ್ರೇಮಾ ಹಾದಿಮನಿ, ಗೀತಾ ಹೊಸಳ್ಳಿ, ಚಂದ್ರಮ್ಮ ಹಾದಿಮನಿ, ಲಕ್ಷ್ಮವ್ವ 24 ನೇ ವಾರ್ಡಿನ ಗುರು-ಹಿರಿಯರು, ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ