ನೆರೆ ಪರಿಹಾರ ಬೆಳೆಸಾಲಕ್ಕೆ ಜಮೆ: ಪರಿಶೀಲನೆಗೆ ಸೂಚನೆ
ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳದ ಬ್ಯಾಂಕಿನಲ್ಲಿ ನೆರೆ ಪರಿಹಾರದ ಹಣವನ್ನು ರೈತರ ಬೆಳೆ ಸಾಲದ ಖಾತೆಗೆ ಜಮಾವಣೆ ಮಾಡಿಕೊಳ್ಳುತ್ತಿರುವ ಬ್ಯಾಂಕಿನ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಎಎಸ್. ಬಿ. ಬೊಮ್ಮನಹಳ್ಳಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಕುರಿತು ಬುಧವಾರ ದಂದು ಕಟಕೋಳದ ಹಲವು ನಾಗರಿಕರು ಜಿಲ್ಲಾಧಿಕಾರಿಗಳನ್ನು ಬೇಟಿಯಾಗಿ ಮನವಿ ನೀಡಿ ಈ ಕುರಿತು ಕಳೆದ ಅಗಷ್ಟನಲ್ಲಿ ರಾಮದುರ್ಗ ತಾಲೂಕಿನ ಸಂಭವಿಸಿದ ಪ್ರವಾಹದಲ್ಲಿ ಬದುಕು ಕಳೆದುಕೊಂಡ ಸಂಸ್ರತ್ತರಿಗೆ ಸರಕಾರ ನೀಡುತ್ತಿರುವ ಪರಿಹಾರದ ಧನವನ್ನು ಕಟಕೋಳದ ಕೆಲವು ಬ್ಯಾಂಕಿನವರು ಬೆಳೆ ಸಾಲದ ಖಾನೆ ಜಮಾವಣೆ ಮಾಡುತ್ತಿದ್ದು, ಈ ಕುರಿತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಈ ಕುರಿತು ರಾಮದುರ್ಗ ತಾಲೂಕು ಅಧಿಕಾರಿಗಳಿಗೆ ನೆರೆ ಪರಿಹಾರ ಹಣ ಬೆಳೆ ಸಾಲಕ್ಕೆ ಜಮೆ ಆಗುತ್ತಿರುವ ಬಗ್ಗೆ ಕ್ರಮಕೈಗೊಳ್ಳುವಂತೆ ದೂರವಾಣಿ ಮೂಲಕ ಸೂಚಿಸಿದ್ದಾರೆ. ಅಲ್ಲದೆ ಈ ಕುರಿತು ಜಿಲ್ಲೆಯಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿರುವ ಬಗ್ಗೆ ಕೇಳಿದ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಆಯಾ ವ್ಯಾಪ್ತಿಯಲ್ಲಿನ ತಾಲೂಕು ಮಟ್ಟದ ಅಧಿಕಾರಿಗಳನ್ನು ಸೂಕ್ತ ನಿಗಾ ವಹಿಸುವಂತೆ ಸೂಚಿಸಲಾಗುವದು ಎಂದು ತಿಳಿಸಿದರು.
ಪಾಲಿಕೆ ಆಡಳಿತಾಧಿಕಾರಿಯಾಗಿ ಬೊಮ್ಮನಹಳ್ಳಿ ನೇಮಕ
ಇಲ್ಲಿನ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿ ಎಸ್. ಬಿ. ಬೊಮ್ಮನಹಳ್ಳಿ ಅವರನ್ನು ನೇಮಿಸಿ ಸಕರ್ಾರ ಬುಧವಾರ ಆದೇಶ ಜಾರಿ ಮಾಡಿದೆ. ಈ ಹಿಂದೆ ಹಲವು ತಿಂಗಳಿಂದ ಪ್ರಾದೇಶಿಕ ಆಯುಕ್ತ ಅಮಲನ್ ಬಿಸ್ವಾಸ್ ಅವರನ್ನು ಪಾಲಿಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಈಗ ಸಕರ್ಾರ ಪರಿಷ್ಕೃತ ಆದೇಶ ಹೊರಡಿಸಿ ಜಿಲ್ಲಾಧಿಕಾರಿಗಳನ್ನು ಪಾಲಿಕೆಯ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶ ಜಾರಿ ಮಾಡಿದೆ.