ಸಾಯಿ ಪ್ರಿಯಾ ಕಾರ್ಖಾನೆಯಲ್ಲಿ ರಾಷ್ಟ್ರೀಯ ಸುರಕ್ಷಾ ಸಪ್ತಾಹ
ರಬಕವಿ-ಬನಹಟ್ಟಿ : ಸಾರ್ವಜನಿಕರಲ್ಲಿ ಕೈಗಾರಿಕಾ ಅವಘಡಗಳನ್ನು ತಡೆಯುವುದು ಹೇಗೆ ಮತ್ತು ಅವಘಡ ನಡೆದಾಗ ಮಾನವ ಸಂಪನ್ಮೂಲ, ಸಾರ್ವಜನಿಕ ಆಸ್ತಿಪಾಸ್ತಿಗಳ ನಾಶವನ್ನು ಯಾವ ರೀತಿ ಕಡಿಮೆ ಮಾಡುವುದು ಎಂಬುದರ ಬಗ್ಗೆ ಮಾಹಿತಿ ತಿಳಿಸುವುದು ರಾಷ್ಟ್ರೀಯ ಸುರಕ್ಷಾ ಸಪ್ತಾಹದ ಮೂಲ ಉದ್ದೇಶವಾಗಿದೆ ಎಂದು ಸಾಯಿಪ್ರೀಯಾ ಸಕ್ಕರೆ ಕಾರ್ಖಾನೆಯ ತಾಂತ್ರಿಕ ನಿರ್ದೇ ಶಕ ಪಿ. ಎಸ್. ಕುಲಕರ್ಣಿ ಹೇಳಿದರು.
ಸಮೀಪದ ಹಿಪ್ಪರಗಿಯ ಸಾಯಿಪ್ರಿಯಾ ಸಕ್ಕರೆಯ ಆವರಣದಲ್ಲಿ ನಡೆದ ರಾಷ್ಟ್ರೀಯ ಸುರಕ್ಷಾ ಸಪ್ತಾಹ ಕಾರ್ಯಕ್ರಮದಲ್ಲಿ ಶೂನ್ಯ ಅಪಘಾತ ಗುರಿಯ ಕುರಿತು ವಿಶೇಷ ಉಪನ್ಯಾಸದಲ್ಲಿ ಕಾರ್ಮಿಕರು ಹಾಗೂ ಕಾರ್ಖಾನೆಯ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡುತ್ತಾ, ಕೆಲಸದ ಸ್ಥಳದಲ್ಲಿ ದುರ್ಘಟನೆಗಳನ್ನು ತಪ್ಪಿಸಲು ಸುರಕ್ಷತಾ ನಿಯಮಗಳು ಮತ್ತು ಕ್ರಮಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಹಾಗೂ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುವುದು ಮುಖ್ಯ ಉದ್ದೇಶ. ಸುರಕ್ಷತಾ ತತ್ವಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕುಲಕರ್ಣಿ ಹೇಳಿದರು.
ಸುರಕ್ಷಾ ಅಧಿಕಾರಿ ಶಿವಾನಂದ ಸುರಕ್ಷಾ ಪ್ರತಿಜ್ಞಾವಿಧಿ ಬೋಧಿಸಿದರು. ಕಬ್ಬು ವಿಭಾಗ, ಮಾನವ ಸಂಪನ್ಮೂಲ, ಸಕ್ಕರೆ, ಇಂಜನೀಯರಿಂಗ್, ಸಹ-ವಿದ್ಯುತ್, ಡಿಸ್ಟಿಲ್ಲರಿ, ಸಿಬಿಜಿ, ಸಿಓಟು, ನೀರು ಸಂಸ್ಕರಣಾ ಘಟಕ, ತ್ಯಾಜ್ಯ ವಿಲೇವಾರಿ ಘಟಕ, ಸೆಕ್ಯುರಿಟಿ ಮತ್ತು ಸುರಕ್ಷಾ ವಿಭಾಗ ಸೇರಿ ಎಲ್ಲ ವಿಭಾಗಗಳ ಮುಖ್ಯಸ್ಥರು, ಇಂಜನೀಯರ್ಸ, ಕೆಮಿಸ್ಟ್ಸ, ಅಧಿಕಾರಿಗಳು, ಕಾಮರ್ಿಕರು, ಗುತ್ತಿಗೆದಾರರು ಉಪಸ್ಥಿತರಿದ್ದರು