ಮಳೆಯ ಆರ್ಭಟಕ್ಕೆ ನದಿಯಂತಾದ ರಾಷ್ಟ್ರೀಯ ಹೆದ್ದಾರಿ : ಹೈರಾಣಾದ ವಾಹನ ಚಾಲಕರು
ಸಂಕೇಶ್ವರ : ಕಳೆದ ಒಂದು ವಾರದಿಂದ ಶಾಂತವಾಗಿದ್ದ ಮಳೆರಾಯ ಬುಧವಾರ ಮತ್ತೆ ಅರ್ಭಟಿಸಿದ್ದು, ಮಳೆರಾಯನ ಆರ್ಭಟಕ್ಕೆ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಅಕ್ಷರಶಃ ನದಿಯಂತೆ ಕಂಡು ಬಂದಿತು.
ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ಮಳೆಯ ಆರ್ಭಟಕ್ಕೆ ಹುಕ್ಕೆರಿ ತಾಲೂಕಿನ ಹೊನ್ನಿಹಳ್ಳಿ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನದಿಯಂತೆ ಭಾಸವಾಯಿತು.
ಬುಧವಾರ ಬೆಳಿಗಿನ ಜಾವ ನಿದ್ದೆಯ ಗುಂಗಿನಲ್ಲಿದ್ದ ಲಾರಿ ಸೇರಿದಂತೆ ಹಲವಾರು ವಾಹನಗಳ ಚಾಲಕರು ತಾವು ನಡೆಸುತ್ತಿದ್ದ ವಾಹನಗಳನ್ನು ನೀರಿನಿಂದ ಹೊರೆಗೆ ತೆಗೆದುಕೊಂಡು ಹೋಗುವದು ಕಷ್ಟಕರವಾಯಿತು.
ಅಲ್ಲದೆ ಕೆಲವು ಕಾರುಗಳು ರಾಷ್ಟ್ರೀಯ ಹೆದ್ದಾರಿಯ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಬಂದು ಬಿದ್ದ ಪರಿಣಾಮವಾಗಿ ಕಾರುಗಳನ್ನು ತಳ್ಳಿಕೊಂಡು ನೀರಿನ ರಭಸದಿಂದ ಹೊರಬರಲು ತಿನುಕಾಟ ಮಾಡಬೇಕಾಯಿತು.
ಅತ್ತ ವಾಹನಗಳ ಚಾಲಕರು ಮಳೆಯ ನೀರಿನಿಂದ ಹೈರಾಣಾದರೆ ಇತ್ತ ಸಂಕೇಶ್ವರ ಪಟ್ಟಣದಲ್ಲಿ ಮಳೆಯ ಆರ್ಭಟಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಿ ಬುಧವಾರ ಸಂಜೆ ವರೆಗೆ ವಿದ್ಯುತ್ ಅಭಾರ ಎದುರಿಸುವಂತಾಯಿತು.