ಗಿರಿಮಲ್ಲಪ್ಪನವರ ಕೈಮಗ್ಗ ಕಾಯಕ ಆದರಣನೀಯ: ಶಿರೋಳ
ಮಹಾಲಿಂಗಪುರ 08: ಇಂದಿನ ಆಧುನಿಕ ಭರಾಟೆಯಲ್ಲಿಯೂ ಸಾಂಪ್ರದಾಯಿಕ ಕುಣಿ ಕೈಮಗ್ಗ ಕಾಯಕವನ್ನು ಜೀವಂತವಾಗಿ ಇಟ್ಟುಕೊಂಡು ಶತಾಯುಷಿ ಕಾಯಕಯೋಗಿ ಗಿರಿಮಲ್ಲಪ್ಪ ಅವರು ಇಂದಿಗೂ ಕೈಮಗ್ಗ ಕಾಯಕ ಮಾಡುತ್ತಿರುವುದು ಆದರಣನೀಯ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಅವರ ಸಮ್ಮುಖದಲ್ಲಿ ಸನ್ಮಾನ ಮಾಡಿ ಗೌರವಿಸುತ್ತಿರುವುದು ನಾಡಿನ ಪ್ರತಿ ನೇಕಾರರಿಗೆ ಸಲ್ಲುವ ಗೌರವ ಎಂದು ರಾಜ್ಯ ಬಿಜೆಪಿ ನೇಕಾರ ಪ್ರಕೋಷ್ಠದ ಅಧ್ಯಕ್ಷ ಮನೋಹರ ಶಿರೋಳ ಹೇಳಿದರು.
ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಅಂಗವಾಗಿ ಸ್ಥಳೀಯ ಶತಾಯುಷಿ ಸಾಂಪ್ರದಾಯಿಕ ಕುಣಿ ಕೈಮಗ್ಗ ನೇಕಾರ ಗಿರಿಮಲ್ಲಪ್ಪ ಕೊಣ್ಣೂರ ಇವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ, ಪ್ರಕಾಶ ಮರೇಗುದ್ದಿ, ಶಿವಾನಂದ ಹುಣಶ್ಯಾಳ, ಮಹೇಶ ಜಿಡ್ಡಿಮನಿ, ಶ್ರೀಶೈಲ ಬಿಸನಕೊಪ್ಪ, ರವಿ ಮುಂಡಗನೂರ, ಉಮೇಶ ಢಪಳಾಪುರ ಇತರರು ಇದ್ದರು.