ರಾಷ್ಟ್ರೀಯ ಮಕ್ಕಳ ದಿನಾಚರಣೆ
ಸಿರುಗುಪ್ಪ: ಮುದ್ದು ಮಕ್ಕಳು ಮಕ್ಕಳೆಂದರೆ ಹೂ ತೋಟದಲ್ಲಿನ ಮೊಗ್ಗಿಗಳು ಅವರನ್ನು ತುಂಬಾ ಜಾಗೃತಿಯಿಂದ ಮತ್ತು ಅಷ್ಟೆ? ಪ್ರೀತಿಯಿಂದ ನಿಭಾಯಿಸಬೇಕು ಮಕ್ಕಳೇ ದೇಶದ ಭವಿಷ್ಯ ನಾಳಿನ ಪ್ರಜೆಗಳು ಕೂಡ ಮಕ್ಕಳಿಗೆ ಸರಿಯಾದ ಶಿಕ್ಷಣದಿಂದ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸಾಕ್ಷರತಾ ಸೇನಾನಿ ಶಿಕ್ಷಣ ಪ್ರೇಮಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಎ.ಅಬ್ದುಲ್ ನಬಿ ಹೇಳಿದರು. ನಗರದ ಸೌದಾಗರ್ ಮೊಹಲ್ಲಾ ಇಬ್ರಾಹಿಮ್ ಮಂಜಿಲ್ ನಲ್ಲಿ ಭಾರತ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ 133ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಮಕ್ಕಳ ದಿನವನ್ನು ಅವರು ನೆನಪಿಸಿ ಸ್ಮರಿಸಿ ಗೌರವಿಸಿ ಮಾತನಾಡುತ್ತಾ ಇಂದು ಮಕ್ಕಳ ದಿನ ಚಾಚಾ ನೆಹರು ಅವರ ಜನ್ಮ ದಿನ ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದ್ದರು ನೆಹರೂ ಅವರಿಗೆ ಮಕ್ಕಳೆಂದರೆ ತುಂಬಾ ಪ್ರೀತಿ ಮಕ್ಕಳಿಗೂ ನೆಹರೂ ಅವರ ಮೇಲೆ ತುಂಬಾ ಪ್ರೀತಿ ಚಾಚಾ ನೆಹರೂ ಎಂದು ಕರೆಯುತ್ತಿದ್ದರು. ಮಕ್ಕಳ ಓದು ಬರಹ ಆಟ ಪಾಠ ಎಲ್ಲವೂ ನೆಹರೂ ಅವರಿಗೆ ತುಂಬಾ ಇಷ್ಟ ಇದರ ದಾಖಲೆ ಪುರಾವೆ ಗಳಿವೆ ನೆಹರು ಪುತ್ರಿ ಇಂದಿರಾ ಗಾಂಧಿ ಅವರು ವಸತಿ ಶಾಲೆಯಲ್ಲಿ ಓದಿದ್ದರು ನೆಹರೂ ಅವರ ಚಿಂತನೆಗಳು ದೂರದೃಷ್ಟಿಯ ಯೊ?ಜನೆಗಳ ಅನುಷ್ಠಾನ ದೇಶದ ಸಮಗ್ರ ಅಭಿವೃದ್ಧಿಗೆ ನೆಹರೂ ಅವರ ಕೊಡುಗೆಗಳನ್ನು ದೇಶ ಸ್ಮರಿಸುತ್ತಿದೆ ಎಂದು ಅಬ್ದುಲ್ ನಬಿ ನುಡಿದರು. ಜಮೀನ್ದಾರ ಸೈಯದ್ ಶಾ ಮೊಹಿಯುದ್ದೀನ್ ಖಾದ್ರಿ, ಸೈಯದ್ ಶಾ ಅಹ್ಮದ್ ಖಾದ್ರಿ ಮತ್ತು ಸಹೋದರರು, ಸರ್ ಖಾಜಿ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಅಶ್ರಫಿ, ತಾಲ್ಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಜಿ ಹಂಡಿ ಹುಸೇನ್ ಬಾಷಾ, ಸಾಮಾಜಿಕ ಕಾರ್ಯಕರ್ತರಾದ ಎ.ಮೊಹಮ್ಮದ್ ಇಬ್ರಾಹಿಂ, ಎ ಮೊಹಮ್ಮದ್ ನೌಶಾದ್ ಅಲಿ, ಮೊಹಮ್ಮದ್ ಖಲೀಲ್ ಸಾಹೇಬ್, ನಗರದ ಈದ್ಗಾ ಮತ್ತು ಖಬರಸ್ಥಾನ್ ಕಮಿಟಿ ಅಧ್ಯಕ್ಷ ಹಂಡಿ ಹಾಶಿಮ್ ಅವರು ಮಕ್ಕಳ ದಿನದ ಶುಭಾಶಯ ಕೋರಿದರು.