ನಂದಗಾವ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಮಡಿಲಿಗೆ
ಮಹಾಲಿಂಗಪುರ 29: ನಂದಗಾವ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಯಮನವ್ವ ತಮ್ಮಣ್ಣ ಬಾರಕೋಲ, ಉಪಾಧ್ಯಕ್ಷರಾಗಿ ಸುಜಾತಾ ಪುಟ್ಟಪ್ಪ ಪೂಜೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಆಯ್ಕೆಯಾದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ನಂದಗಾವ ಗ್ರಾಮದ ಸಮಸ್ತ ಗ್ರಾಮಸ್ಥರು ಮತ್ತು ಕಾಂಗ್ರೆಸ್ ಮುಖಂಡರ ಪರವಾಗಿ ಸತ್ಕರಿಸಲಾಯಿತು.
ಸದಸ್ಯ ರಂಗಪ್ಪ ತಮ್ಮಣ್ಣ ಹೊಸೂರ್ ಹಾಗೂ ಶಾಂತವ್ವ ಮಹಾದೇವ ನಂದಿಗೋಣಿ ಅವರು ಆಯ್ಕೆ ಸಂದರ್ಭದಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ನಂದಗಾವ ಗ್ರಾಮದಲ್ಲಿ ಪಂಚಾಯತಿ ವ್ಯಾಪ್ತಿಯ ಎಲ್ಲ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರೈಸಲಾಗುವುದು, ಜೊತೆಗೆ ಗ್ರಾಮದ ಸವಾರ್ಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಭರವಸೆ ನೀಡಿದರು.
ಗ್ರಾಮದ ಮುಖಂಡ ಬಿಜಿ ಹೊಸೂರ್, ರಬಕವಿ ಬನಹಟ್ಟಿ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷ ರಾಜು ಬಾರಕೋಲ, ಶಿವನಗೌಡ ಬಿ.ಪಾಟೀಲ, ಕೆಕೆ ಬಿ.ಪಾಟೀಲ್, ಹನುಮಂತಗೌಡ ಪಾಟೀಲ್, ಸಂಗಪ್ಪ ಮುಗಳಖೋಡ, ರಾಮಣ್ಣ ಹೊಸೂರ್, ಶ್ರೀಶೈಲ್ ಬಾರಕೋಲ, ಮಲ್ಲಪ್ಪ ನಿಡಗುಂದಿ, ತಿಮ್ಮನಗೌಡ ಪಾಟೀಲ, ಮಾರುತಿ ಇಟ್ನಾಳ, ಮಹಾದೇವ ನಂದಿಗೋಣಿ, ರಾಮಪ್ಪ ಬಾರಕೋಲ, ಮಲ್ಲಪ್ಪ ಹರಿಜನ, ಮಕಬುಲ್ ಸಾಬ ಮುಲ್ಲಾ, ಮೆಹಬೂಬಸಾಬ ಕೌಜಲಗಿ, ಸೈದುಸಾಬ ಜಮಾದಾರ್, ವಿಠ್ಠಲ್ ಮ್ಯಾಗಾಡಿ, ಕಲ್ಲಪ್ಪ ಹ್ಯಾಗಾಡಿ, ಸದಾಶಿವ ಜಗದಾಳ, ಪುಟ್ಟಪ್ಪ ಪೂಜೇರಿ, ಜಯರಾಜ ಗಸ್ತಿ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ಉಪಸ್ಥಿತರಿದ್ದರು.