ಅನಾಥಾಶ್ರಮದಲ್ಲಿ ನಲಪಾಡ್ ಜನ್ಮ ದಿನಾಚರಣೆ.
ಮಹಾಲಿಂಗಪುರ: ಕರ್ನಾಟಕ ಪ್ರದೇಶ ಯೂಥ್ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಮಹ್ಮದ್ ನಲಪಾಡ್ ಅವರ ಹುಟ್ಟು ಹಬ್ಬವನ್ನು ಬಾಗಲಕೋಟ ಜಿಲ್ಲಾ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೂರಜ್ ಅವಟಿ ಅವರ ನೇತೃತ್ವದಲ್ಲಿ ಮುಧೋಳ ವಿಜಯ ಬುದ್ಧಿಮಾಂದ್ಯ ಅನಾಥಾಶ್ರಮದ ಮಕ್ಕಳೊಂದಿಗೆ ಆಚರಿಸಲಾಯಿತು.
ಜಿಲ್ಲಾ ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ ಚಕ್ರವರ್ತಿ, ರಬಕವಿ ಬನಹಟ್ಟಿ ಬ್ಲಾಕ್ ಯೂಥ್ ಕಾಂಗ್ರೆಸ್ ಉಪಾಧ್ಯಕ್ಷ ಸುನೀಲ ಬನಹಟ್ಟಿ,ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಸಿಂಧೂರ ಹಲಸಪ್ಪಗೊಳ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗ ಮಹ್ಮದ್ ಮಕಾನದಾರ, ಜಮೀಲ್ ಮುಜಾವರ ಇತರರಿದ್ದರು.