ಡೇನಿಲ್ ಮೆಡ್ವೆಡೆವ್ ವಿರುದ್ಧ ಸೋತ ನಗಾಲ್
ಟೋಕಿಯೊ, ಜು.26 - ಭಾರತದ ಭರವಸೆಯ ಟೆನಿಸ್ ಪಟು ಭಾರತದ ಸುಮಿತ್ ನಗಾಲ್, ಒಲಂಪಿಕ್ಸ್ ಕ್ರೀಡಾಕೂಟದ ಪುರುಷರ ವಿಭಾಗದ ಸಿಂಗಲ್ಸ್‌ನ ಎರಡನೇ ಸುತ್ತಿನಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ.
ವಿಶ್ವ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ರಷ್ಯಾದ ಡೇನಿಲ್ ಮೆಡ್ವೆಡೆವ್ 6-2, 6-1ರಿಂದ ಯುವ ಆಟಗಾರ ಭಾರತದ ಸುಮಿತ್ ನಗಾಲ್ ಅವರನ್ನು ಎರಡು ನೇರ ಸೆಟ್‌ಗಳ ಪರಾಜಯಗೊಳಿಸಿ ಮುನ್ನಡೆದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 160 ಸ್ಥಾನದಲ್ಲಿರುವ ಸುಮಿತ್ ನಗಾಲ್, ಯಾವ ಹಂತದಲ್ಲಿಯೂ ಡೇನಿಲ್‌ಗೆ ಸಮಬಲದ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ. ರಷ್ಯಾದ ಡೇನಿಲ್ ಮೆಡ್ವೆಡೆವ್, ಸುಮಿತ್ ಅವರನ್ನು 66 ನಿಮಿಷಗಳ ಆಟದಲ್ಲಿ ಪರಾಜಯಗೊಳಿಸಿ ಮೂರನೇ ಸುತ್ತು ಪ್ರವೇಶಿಸಿದರು.