ಗಿಡ ನೆಟ್ಟು ಎನ್.ಸಿ.ಸಿ. ದಿನ ಆಚರಣೆ
ಬೆಳಗಾವಿ 29 : ಭರತೇಶ ಪ್ರೌಢಶಾಲೆ ಎನ್.ಸಿ.ಸಿ, ಸೆಂಟ್ರಲ್ ಪ್ರೌಢಶಾಲೆಯ ಎನ್.ಸಿ.ಸಿ ವಿಭಾಗ ಹಾಗೂ ಗ್ರೀನ್ ಸೇ"ಯರ್ಸ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಕ್ಯಾಂಪ್ ಆವರಣದಲ್ಲಿ ಸುಮಾರು 100ಕ್ಕೂ ಹೆಚ್ಚು ಗಿಡಗಳನ್ನು ನೆಡುವುದರೊಂದಿಗೆ ಎನ್.ಸಿ.ಸಿ. ದಿನಾಚರಣೆಯನ್ನು ಆಚರಿಸಲಾುತು. ಸುಮಾರು 100ಕ್ಕೂ ಹೆಚ್ಚು ಎನ್.ಸಿ.ಸಿ ಕ್ಯಾಡೆಟ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವ"ಸಿದ್ದರು.
ಈ ಸಂದರ್ಭದಲ್ಲಿ ಎನ್.ಸಿ.ಸಿ. ಅಧಿಕಾರಿ ಹಾಗೂ ಆರ್.ಎಲ್.ಎಸ್. ಪಿಯು ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ಕಾಮಗೋಳ, ಭರತೇಶ ಪ್ರೌಢಶಾಲೆಯ ಎನ್.ಸಿ.ಸಿ ಅಧಿಕಾರಿ ವಿಜಯಕುಮಾರ ಹಣ್ಣಿಕೇರಿ, ಸೆಂಟ್ರಲ್ ಪ್ರೌಢಶಾಲೆಯ ಎನ್.ಸಿ.ಸಿ ಅಧಿಕಾರಿ ಪಿ.ಬಿ ಮಾಸ್ತಿಹೋಳಿ, ಕ್ಯಾಡೆಟ್‌ಗಳನ್ನುದ್ದೇಶಿಸಿ ಪರಿಸರ ಜಾಗೃತಿಯ ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಗ್ರೀನ್ ಸೇ"ಯರ್ಸ ಸಂಸ್ಥೆಯ ಪದಾಧಿಕಾರಿಗಳಾದ ಅಜೀತ ಹುಕ್ಕೇರಿಕರ, ಅ"ುತ ಉಪ್ಪಿನ್, ಜ್ಯೋತಿ ಉಪ್ಪಿನ್, ಆನಂದ ಹವನೂರ, ಶಶಿಕಾಂತ ಫಂಡಿ, ಕುಮಾರಸ್ವಾ"ು ಎಚ್.ಓ., ಶೈಲೇಶ್ ತುಬಾಕಿ, ರಾಘವೇಂದ್ರ ನಾಯ್ಡು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಯಶಸ್ವಿಗೆ 8 ಕರ್ನಾಟಕ ಎಯರ್ ಸ್ಕಾ-್ವಡರ್ನ್ ಎನ್.ಸಿ.ಸಿ. ಯ ಮುಖ್ಯಸ್ಥರಾದ ಗ್ರುಪ್ ಕ್ಯಾಪ್ಟನ್ ಉಮೇಶ ಪಾಟ್ಕರ್, ವಾರಂಟ್ ಆಫಿಸರ್ ಸತೀಶಕುಮಾರ, ಸಾರ್ಜಂಟ್ ರಾಮು ಭಿಶ್ನೇು, ಭರತೇಶ ಪ್ರೌಢಶಾಲೆಯ ಹಾಗೂ ಸೆಂಟ್ರಲ್ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಎಸ್. ಎನ್. ಅಕ್ಕಿ ಮತ್ತು ವಿ.ಎ. ಹಸಭೆ ಹಾಗೂ ಗ್ರೀನ್ ಸೇ"ಯರ್ಸ ಸಂಸ್ಥೆಯ ಮುಖ್ಯಸ್ಥರಾದ ಸ"ುರ್ ಮಜಲಿಯವರು ಸಹಕರಿಸಿದರು.