ನ್ಯಾ. ಎನ್.ಕೆ. ಪಾಟೀಲ ಸಮಿತಿಯ ಶಿಫಾರಸ್ಸು ಜಾರಿಗೆಗೆ ಚಿಕಣಿ ಒತ್ತಾಯ

ನ್ಯಾ. ಎನ್.ಕೆ. ಪಾಟೀಲ ಸಮಿತಿಯ ಶಿಫಾರಸ್ಸು ಜಾರಿಗೆಗೆ ಚಿಕಣಿ ಒತ್ತಾಯ

ಬೆಳಗಾವಿ : ಅಪೌಷ್ಟಿಕ ಮುಕ್ತ ರಾಜ್ಯಕ್ಕಾಗಿ ಮತ್ತು ಅಂಗನವಾಡಿಗಳ ಸಬಲೀಕರಣಕ್ಕಾಗಿ ನ್ಯಾಯಮೂತರ್ಿ ಎನ್.ಕೆ. ಪಾಟೀಲ್ ಸಮಿತಿಯ ಶಿಫಾರಸ್ಸುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸಾಮಾಜಿಕ ಪರಿವರ್ತನೆ ಜನಾಂದೋಲನ ಸಮಿತಿ ಮುಖಂಡ ವಿಠ್ಠಲ ಚಿಕಣೆ ಆಗ್ರಹಿಸಿದರು.  

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಬೆಳಿಗ್ಗೆ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಅಪೌಷ್ಟಿಕತೆ ರಾಜ್ಯದ ಜ್ವಲಂತ ಸಮಸ್ಯೆಯಾಗಿದೆ. ವಯಸ್ಸಿನ ಅನುಗುಣವಾಗಿ ಮಕ್ಕಳ ದೇಹದಲ್ಲಿ ಪೌಷ್ಟಿಕಾಂಶಗಳು ಇಲ್ಲದಿರುವುದೇ ಪ್ರಮುಖ ಕಾರಣ. ಆಥರ್ಿಕ ಸಂಪನ್ಮೂಲಗಳ ಅಸಮರ್ಪಕ ಹಂಚಿಕೆ ಮತ್ತು ಬಡತನಕ್ಕೂ ನೇರ ಸಂಬಂಧವಿದೆ. ದುಡಿಯುವ ವರ್ಗದ ತಳಸಮುದಾಯಗಳಿಗೆ ಅದರಲ್ಲೂ ಮುಖ್ಯವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಸಮತೋಲನದ ಆಹಾರ ದೊರೆಯದಿರುವುದರಿಂದ ಅಪೌಷ್ಟಿಕತೆ ಅಭಾದಿತರಾಗುತ್ತಿದ್ದಾರೆ ಎಂದರು. 

ಮಕ್ಕಳ ಅಪೌಷ್ಟಿಕತೆಯಲ್ಲಿ ದಕ್ಷಿಣ ಭಾರತದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಆದರೆ ರಾಜ್ಯ ಸಕರ್ಾರ ಈ ಗಂಭೀರ ಪರಿಸ್ಥಿತಿಯನ್ನು ಸುಳ್ಳು ಅಂಕಿ ಅಂಶಗಳನ್ನು ನೀಡಿ ದಾರಿ ತಪ್ಪಿಸುವ ಕೆಲಸ ನಡೆದಿದೆ ಎಂದು ಆರೋಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ 2 ತಿಂಗಳಿಗೊಮ್ಮೆ 6 ವರ್ಷದೊಳಗಿನ ಮಕ್ಕಳ, ಗಭರ್ಿಣಿಯರ, ಬಾಣಂತಿಯರ ಆರೋಗ್ಯ ಶಿಬಿರಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಆದ ಕಾರಣ ಜಿಲ್ಲಾ ಮಟ್ಟದ ಸಮಿತಿ ರಚಿಸಬೇಕು, ಬಾಡಿಗೆ ಕಟ್ಟಡ ನಿರ್ವಹಣೆ, ಕೆಲವು ಕಡೆ ನೂತನ ಕಟ್ಟಡವನ್ನು ಅಂಗನವಾಡಿ ಹಸ್ತಾಂತರಿಸಬೇಕು ಎಂದು ಅವರು ಒತ್ತಾಯಿಸಿದರು.

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸುಲಭವಾಗಿ ಡಯೇರಿಯಾ, ರಕ್ತಹೀನತೆ, ವಾಂತಿ, ಭೇದಿಮತ್ತಿತರ ರೋಗಗಳಿಗೆ ಅವರು ತುತ್ತಾಗುತ್ತಾರೆ. ದೇಶದ ಶೇ.43ರಷ್ಟು ಮಕ್ಕಳ ಸಾವಿಗೂ ಅಪೌಷ್ಟಿಕತೆಯೇ ಕಾರಣವಾಗಿದ್ದು ಕಳವಳಕಾರಿ ಸಂಗತಿಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಕಿ ಅಂಶಗಳ ಪ್ರಕಾರ ಕನರ್ಾಟಕದಲ್ಲಿ 5 ವರ್ಷದ ಮಕ್ಕಳಲ್ಲಿ ಶೇ.38ರಷ್ಟು ಕಡಿಮೆ ತೂಕದ ಮಕ್ಕಳಿದ್ದಾರೆ. ಶೇ.11.6ರಷ್ಟು ಮಕ್ಕಳು ತೀರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷೆ ಶೋಭಾ ಗಸ್ತಿ, ಸುರಕ್ಷಾ ಸಂಸ್ಥೆ ಸಿಸ್ಟರ್ ಲೂರ್ದ, ಕಲ್ಲಪ್ಪ ಮಾಂಗ, ಮಂಜುಳಾ ಹರಿಜನ, ಮುಕ್ತಾ ಕೆಂಗನ್ನವರ, ಜಾನಕಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ