ಎಲಬುರ್ಗ

ಸಂಗೀತದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ: ಹರಳಿ

ಸಂಗೀತದಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ: ಹರಳಿ

ಯಲಬುರ್ಗಾ  05: ಸಂಗೀತ ದಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ತಂದುಕೊಡುತ್ತದೆ. ಸಂಗೀತ ರೋಗವನ್ನು ನಿವಾರಿಸುವ ಶಕ್ತಿ ಹೊದಿದೆ ಎಂದು ಶರಣಪ್ಪ. ವಿ. ಹರಳಿ ಹೇಳಿದರು.

ತಾಲೂಕಿನ ಕೋನಸಾಗರದಲ್ಲಿ ನಡೆದ  ಕುಮಾರೇಶ್ವರ ಸಾಂಸ್ಕೃತಿಕ ಕಲಾ ಸಂಸ್ಥೆ ಕುಷ್ಟಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ/ಬೆಂಗಳೂರು 2022-23ನೇ ಸಾಲಿನ ಸಂಘ ಸಂಸ್ಥೆಗಳ ಧನ ಸಹಾಯ ಯೋಜನೆಯಡಿಯಲ್ಲಿ ಗುರು ಪರಂಪರೆ ಸಂಗೀತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಗೀತ ಆಲಿಸುವುದರಿಂದ ಏಕಾಗ್ರತೆ ಮೂಡಿ ಮನಸ್ಸು ಪ್ರಪುಲ್ಲಗೊಳ್ಳುತ್ತದೆ ಮತ್ತು ಚೈತನ್ಯ ಭರಿತವಾಗುತ್ತದೆ. ಸಂಗೀತದಲ್ಲಿ ಪ್ರತಿಯೊಬ್ಬರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೇ ಮಕ್ಕಳಿಗೂ ಸಂಗೀತದಲ್ಲಿ ಆಸಕ್ತಿ ಬರುವಂತೆ ಮಾಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಮೌನೇಶ್ ಕುಮಾರ್ ಲಿಂಗನಬಂಡಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಸಂಗೀತ ಕಲಿಕೆಗೆ ಒಲವು ತೋರಿಸಬೇಕಾಗಿದೆ.ಪ್ರಸ್ತುತ ಸಂಗೀತಕ್ಕೆ ಉತ್ತಮ ಪ್ರೋತ್ಸಾಹ ಸಿಗುತ್ತಿದೆ ಎಂದು ತಿಳಿಸಿದರು.

ಕಲಾವಿದರಾದ ಶಿವಶರಣಯ್ಯ ಮ್ಯಾಗಳಮಠ, ಹೊಳಿಯಪ್ಪ ಗುರಿಕಾರ, ಬಸವರಾಜ ಮಹಾಂತ, ಕುಮಾರೇಶ್ವರ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಅಧ್ಯಕ್ಷರು ಪ್ರತಾಪ್ ಕುಮಾರ್ ಹಿರೇಮಠ್, ಮಂಜುನಾಥ್ ಕಟ್ಟಿಮನಿ, ದೇವೇಂದ್ರಪ್ಪ ಕಮ್ಮಾರ, ಹಿರಿಯ ಕಲಾವಿದರು, ಸುರೇಶ್. ಎಚ್ ಈಳಿಗೆರ್ ಸೇರಿ ಇತರರು ಉಪಸ್ಥಿತರಿದ್ದರು 

ಸುದ್ದಿ ಓದಿ