ರಬಾಕಾವಿಬನಹಟ್ಟಿ

ಸಂಗೀತವೆಂಬುದು ತಪಸ್ಸು: ಸಿದ್ಧರಾಜ ಪೂಜಾರಿ

ಸಂಗೀತವೆಂಬುದು ತಪಸ್ಸು: ಸಿದ್ಧರಾಜ ಪೂಜಾರಿ

ರಬಕವಿ -ಬನಹಟ್ಟಿ 23: ಕಲೆ, ಸಾಹಿತ್ಯ, ಸಂಗೀತ ಜೀವಂತವಾಗಿರಬೇಕು. ಸಂಗೀತ ಎಂಬುದು ತಪಸ್ಸು. ಅದನ್ನು ಸದಾ ಆರಾಧಿಸಬೇಕು ಎಂದು ಬನಹಟ್ಟಿಯ ಸಂಗೀತ ವಿಮರ್ಶಕರು, ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಹೇಳಿದರು.ರಬಕವಿ ಬನಶಂಕರಿ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕ ರಬಕವಿ, ವಲಯ ತೇರದಾಳ, ಮಹಾಲಿಂಗಪುರ ಅವರು, ಬನಶಂಕರಿ ಮಹಿಳಾ ಮಂಡಳದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ 7 ದಿನಗಳ ಗೀತ ಗಾಯನ ಶಿಬಿರವನ್ನು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿ ಸಂಗೀತ ಪ್ರೀತಿಸಿ ಅದು ನಮ್ನನ್ನು ಪ್ರೀತಿಸುತ್ತದೆ. ನಾದದಲ್ಲಿ ಭಕ್ತಿ ಇರಬೇಕೆಂದು ಹೇಳಿದರು.ಬನಶಂಕರಿ ದೇವಸ್ಥಾನ ಟ್ರಸ್ಟ್‌ ಸಮಿತಿ ಚೇರಮನ್ ಚನ್ನಬಸಪ್ಪ ಬಿಜಾಪುರ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಉಪನ್ಯಾಸಕರಾದ ಎಂ. ಎಸ್‌. ಬದಾಮಿ ಮಾತನಾಡಿ ಶಿಬಿರದ ಲಾಭ ಪಡೆದುಕೊಳ್ಳಲು 50ಶಿಬಿರಾರ್ಥಿಗಳಿಗೆ ಹೇಳಿದರು.ಡಾ. ಜ್ಯೋತಿ ಚಿತ್ತರಗಿ, ಮಹಾಲಿಂಗಪ್ಪ ಕೊಕಟನೂರ, ತೇರದಾಳ ಕಸಾಪ ವಲಯ ಅಧ್ಯಕ್ಷ ಗಂಗಾಧರ ಮೋಪಗಾರ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಪರಮೇಶ್ವರ ತೇಲಿ, ಪರಶುರಾಮ ಜೋಗಿ ವೇದಿಕೆಯಲ್ಲಿದ್ದರು.ಭಾರತಿ ಕಕಮರಿ ಪ್ರಾರ್ಥಿಸಿದರು.ಕಸಾಪ ಅಧ್ಯಕ್ಷ ಮ. ಕೃ. ಮೇಗಾಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಗೀತಾ ಎಸ್‌. ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಶ್ರೀಶೈಲ ಬುರ್ಲಿ ವಂದಿಸಿದರು.ಮಹಾದೇವ ಬಾಪುರೆ, ಮಹಾದೇವ ಕವಿಶೆಟ್ಟಿ, ಶಿವಾನಂದ ದಾಶ್ಯಾಳ,  ಆರ್‌. ಎಸ್‌. ರೋಣದ, ಮಹಾದೇವ ಹೆರಕಲ್, ಶಿವು ಕಡಕೋಳ, 55 ಶಿಬಿರಾರ್ಥಿಗಳು, ಮಹಿಳಾ ಮಂಡಳಿ ಸದಸ್ಯರು, ಬನಶಂಕರಿ ದೈವ ಮಂಡಳಿ ಹಿರಿಯರು ಪಾಲ್ಗೊಂಡಿದ್ದರು.  ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಶಿಬಿರ ನಡೆಯುವುದು.  ಶಿಬಿರಗೀತೆ, ವಚನ, ಭಾವಗೀತೆ, ಜಾನಪದಗೀತೆ, ನಾಡು ನುಡಿಗೆ ಸಂಬಂಧಿಸಿದ ಗೀತೆಗಳನ್ನು ಕಲಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ. 


ಸುದ್ದಿ ಓದಿ