ಸಚಿವ ಸ್ಥಾನ ಸಿಗದಿರುವುದಕ್ಕೆ ಅಸಮಾಧಾನವಾಗಿಲ್ಲ : ಮುರುಗೇಶ್ ನಿರಾಣಿ

ಸಚಿವ ಸ್ಥಾನ   ಸಿಗದಿರುವುದಕ್ಕೆ   ಅಸಮಾಧಾನವಾಗಿಲ್ಲ : ಮುರುಗೇಶ್ ನಿರಾಣಿ

ಬೆಂಗಳೂರು,ಆ 23:  ತಮಗೆ ಸಚಿವ ಸ್ಥಾನ ಕೊಟ್ಟರೂ ಸರಿ, ಕೊಡದಿದ್ದರೂ ಖುಷಿಯಾಗಿರುತ್ತೇನೆ,   ಅಸಮಾಧಾನ ತಮ್ಮ ಜಾಯಮಾನದಲ್ಲಿಯೇ ಇಲ್ಲ.ತಮಗಿನ್ನೂ ವಯಸ್ಸಿದೆ ಯುಡಿಯೂರಪ್ಪ ಅವರ ಸ್ಥಾನವನ್ನೂ ತಲುಪುವ  ಅವಕಾಶವೂ ಇದೆ ಎಂದು ಪರೋಕ್ಷವಾಗಿ ತಾವೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.  

ತಮ್ಮ ಹುಟ್ಟುಹಬ್ಬದ ಹಿನ್ನಲೆಯಲ್ಲಿ ರಾಜಾಜಿನಗರದ ಇಸ್ಕಾನ್ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ  ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಕೃಷ್ಣ ಜನ್ಮಾಷ್ಠಮಿಯಂದೇ ನಾನು ಹುಟ್ಟಿದ್ದು ಕಾಕತಾಳೀಯವಾಗಿದೆ.ಹೀಗಾಗಿ ಕೃಷ್ಣನ ದೇಗುಲಕ್ಕೆ ಬಂದು ದರ್ಶನ ಪಡೆದಿದ್ದೇನೆ. ಇಲ್ಲಿಗೆ ಬಂದಾಗ ತಮಗೆ ಒಂದು  ರೀತಿಯ ಶಕ್ತಿ ಬಂದಂತಾಗುತ್ತದೆ. ಶ್ರೀಕೃಷ್ಣನ ಆಶೀವರ್ಾದದಿಂದಲೇ ಎಲ್ಲಾ ಕೆಲಸವನ್ನು ಮಾಡಿಕೊಂಡು  ಬರುತ್ತಿದ್ದೇನೆ ಎಂದು ಅವರು ತಿಳಿಸಿದರು. 

ಬಿಜೆಪಿ  ಸಕರ್ಾರದಲ್ಲಿ ಸಚಿವನಾಗುವ ಅವಕಾಶ ಕೈತಪ್ಪಿದ್ದಕ್ಕೆ ತಮಗೆ ಯಾವುದೇ ಅಸಮಾಧಾನ ವಾಗಿಲ್ಲ.ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಂದೆಯ ಸ್ಥಾನದಲ್ಲಿದ್ದಾರೆ.ಹಾಗಾಗಿ ನಮ್ಮದೇ ಕುಟುಂಬದವರು ಮುಖ್ಯಮಂತ್ರಿ ಆಗಿರುವಷ್ಟು ಸಂತೋಷ  ತಮಗಾಗಿದೆ ಎಂದು  ಮುರುಗೇಶ್ ನಿರಾಣಿ ತಿಳಿಸಿದರು. 

ಹಿಂದೆ 2008ರ ಬಿಜೆಪಿ ಸಕರ್ಾರದಲ್ಲಿ ಮೊದಲ ಬಾರಿಗೆ ಬೃಹತ್ ಕೈಗಾರಿಕೆ ಸಚಿವನಾಗಿದ್ದಾಗ,ತಮಗೆ  ಸಚಿವ ಸ್ಥಾನ ಕೊಡಿ ಎಂದು ವರಿಷ್ಠರನ್ನು ಕೇಳಿರಲಿಲ್ಲ.ಈಗಲೂ ಕೇಳುವುದಿಲ್ಲ.ಆಗ ತಮಗೆ ಸಚಿವ ಸ್ಥಾನ ದಕ್ಕುವಂತಾಗಲು ಸಾಕಷ್ಟು ಜನರು ತ್ಯಾಗ ಮಾಡಿದ್ದಾರೆ. ಅದನ್ನು ತಾವು ಎಂದೂ ಮರೆಯುವುದಿಲ್ಲ. ಪ್ರಸ್ತುತ ಸಚಿವರಿಗೆ ಸೂಕ್ತ ಸಲಹೆಗಳನ್ನು ನೀಡಿ ಸಹಕಕರಿಸಲು  ನಿರ್ಧರಿಸಿದ್ದೇನೆ.  ಸಕರ್ಾರ ಒಳ್ಳೆಯ ಕೆಲಸ ಮಾಡಬೇಕು ಎಂಬುದಷ್ಟೇ ತಮ್ಮ ಬಯಕೆ ಎನ್ನುವ ಮೂಲಕ   ತಮಗೆ ಸಚಿವ ಸ್ಥಾನ  ಲಭಿಸುವುದಿಲ್ಲ  ಎಂಬ  ಪರೋಕ್ಷ  ಸೂಚನೆ ನೀಡಿದರು. 

 

ಸುದ್ದಿ ಓದಿ