ಮಹಲಿಂಗಪುರ

ಪುರಸಭೆ ಅಧ್ಯಕ್ಷ ಮಹಾಲಿಂಗಪುರ ಪಟ್ಟಣದ ಸರ್ವ ಸಮಾಜಗಳ ಹಿತೈಷಿಗಳು

ಪುರಸಭೆ ಅಧ್ಯಕ್ಷ ಮಹಾಲಿಂಗಪುರ ಪಟ್ಟಣದ ಸರ್ವ ಸಮಾಜಗಳ ಹಿತೈಷಿಗಳು

ಹಣಮಂತ ನಾವಿ  

ಮಹಾಲಿಂಗಪುರ 19:  ಇತ್ತಿಚೆಗೆ ಪುರಸಭೆ ಸ್ಥಾನಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಯಲ್ಲನ್ನಗೌಡ ಬಸಲಿಂಗಪ್ಪಗೌಡ. ಪಾಟೀಲ್ ಪಟ್ಟಣದ ಸರ್ವ ಸಮಾಜಗಳ ಹಿತೈಷಿಗಳಾಗಿದ್ದಾರೆ. 

ಇವರು ಕಾಂಗ್ರೆಸ್ ಪಕ್ಷದ ಮುಖಂಡರಾಗಿದ್ದರೂ ಎಲ್ಲ ಪಕ್ಷಗಳ ಹಾಗೂ ಸಮುದಾಯಗಳ ಜನರ ಜೊತೆ ಬೆರೆತು ಪಟ್ಟಣದ ಅಭಿವೃದ್ಧಿ ಪಥಕ್ಕೆ ಸಹಕಾರಿಗಳಾಗಿ, ವಿಪಕ್ಷಗಳ ಜೊತೆಯೂ ಉತ್ತಮ ಸಂಪರ್ಕ ಕಾಯ್ದುಕ್ಕೊಂಡಿದ್ದಾರೆ.  

ಇದೆ ಮನೋಭಾವ ಕಾರಣದಿಂದಲೋ ಏನೋ ಅಗಷ್ಟ 23 ರಂದು ನಡೆದ ಪುರಸಭೆ ಅಧ್ಯಕ್ಷ /ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷ ಸ್ಥಾನ ಯಲ್ಲನ್ನಗೌಡರನ್ನು ಅರಸಿ ಬಂದಿತು. ಇದು ಸಮಯೋಚಿತವೂ ಆಗಿದ್ದು, ಮುಖಂಡರು, ಕಾರ್ಯಕರ್ತರು ಮತ್ತು ಸರ್ವ ಸಮಾಜಗಳ ಹಿತೈಷಿ ವರ್ಗದ ಹರ್ಷವನ್ನು ಇಮ್ಮಡಿಗೊಳಿಸಿದೆ. 

ತಂದೆ ದಿ.ಬಸಲಿಂಗಪ್ಪಗೌಡ ಪಾಟೀಲ್ ಮೂರು ದಶಕಗಳ ಹಿಂದೆ ಮತ್ತು ಪ್ರಸ್ತುತ ಯಲ್ಲನ್ನಗೌಡರು ಊರಿನ ಪ್ರಮುಖರಾಗಿ ಜನತೆಯ ಅನೇಕ ವ್ಯಾಜ್ಯಗಳನ್ನು ಬಗೆ ಹರಿಸಿ ಜನತಾ ನ್ಯಾಯಾಲಯದಂತೆ ಕೆಲಸ ಮಾಡಿ, ಜನರ ವಿಶ್ವಾಸ ಗಳಿಸಿದವರು. 90ರ ದಶಕದಲ್ಲಿ ಪುರಸಭೆ ಸದಸ್ಯರಾಗಿ ಆಯ್ಕೆಗೊಳ್ಳುವ ಮೂಲಕ ರಾಜಕೀಯ ಬದುಕು ಆರಂಭಿಸಿ, ಒಟ್ಟು ಮಹಾಲಿಂಗಪುರ ಪುರಸಭೆಗೆ ಮೂರು ಬಾರಿ ಪ್ರವೇಶ ಪಡೆಯುವುದರೊಂದಿಗೆ ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ. 

ಹವ್ಯಾಸ : ರೈತಾಪಿ ವರ್ಗದ ಇವರು, ಸಾಕು ಪ್ರಾಣಿಗಳ ಮೇಲೆ ಅಪಾರ ಪ್ರೇಮ ಉಳ್ಳವರಾಗಿ ಪಟ್ಟಣದ ಹಿರಿಯರ ಸಹಕಾರದಿಂದ ಪ್ರತಿ ವರ್ಷ ಕಾರ ಹುಣ್ಣಿಮೆಯಲ್ಲಿ ಎತ್ತುಗಳ ಕರಿ ಹರಿಯುವುದು, ಮಹಾಲಿಂಗೇಶ್ವರ ಜಾತ್ರೆಯಲ್ಲಿ ಕುಸ್ತಿ, ಬಸವೇಶ್ವರ ಜಾತ್ರೆಯಲ್ಲಿ ತೆರುಬಂಡಿ, ಕಲ್ಲು ಜಗ್ಗುವ ಸ್ಪರ್ಧೆ ಏರಿ​‍್ಡಸಿ ಮತ್ತು ಪಟ್ಟಣದಲ್ಲಿ ನಡೆಯುವ ಇತರೆ ಕ್ರೀಡೆಗಳಿಗೂ ಸಹಕಾರ ನೀಡುತ್ತ ಬಂದಿದ್ದಾರೆ. ಈ ಸಂದರ್ಭದ ಸ್ಪರ್ಧಿಗಳಿಗೆ ಕಾರ ಗಾಡಿ, ಸೈಕಲ್ ಮೋಟಾರ್ ಮತ್ತು ಲಕ್ಷ ಲಕ್ಷ ನಗದು ಹಣ ನೀಡಿ ಪ್ರಾಣಿ ಪ್ರೇಮ ಮೆರೆಯುತ್ತಾರೆ. 


ಸುದ್ದಿ ಓದಿ