ಸಿರುಗುಪ್ಪ

ಭಾವೈಕ್ಯತೆಯ ಸಂಕೇತ ಮೊಹರಂ ಆಚರಣೆ

ಭಾವೈಕ್ಯತೆಯ ಸಂಕೇತ ಮೊಹರಂ ಆಚರಣೆ

ಸಿರುಗುಪ್ಪ 19: ಅಲ್ಲಾಹ್ ರಸೂಲರ ನಬಿ ಕರೀಂ "ಸೋ "ಸೌದಿ ಅರೇಬಿಯಾದ ಮೆಕ್ಕಾದಿಂದ ಮದೀನಾಗೆ ಹೋದಾಗಿನಿಂದ ಆರಂಭವಾಗುವ ಚಂದ್ರಮಾನ ಕಾಲ ಗಣನೆಯ ಪ್ರಕಾರ ಮೊಹರಂ ಮಾಸ ಹಿಜರಿ ಸನ್ 1443ನೇ ಹೊಸ ವರ್ಷದ ಪ್ರಾರಂಭ ಮುಹರ್ರಂ ಇಸ್ಲಾಂನ ಪ್ರಥಮ ತಿಂಗಳಾಗಿದೆ. ಪ್ರೀತಿಯ ಶುಭಾಶಯಗಳು ಎಂದು ಸರ್ಕಾರಿ ಸರ್ ಖಾಜಿ ಸೈಯದ್ ಶಾ ಅಬ್ದುಲ್ ರಜಾಕ್ ಖಾದ್ರಿ ಸಾಹೇಬ್ ಅಶ್ರಫಿ ತಿಳಿಸಿದರು.  

ಜಗತ್ತಿನಾದ್ಯಂತ ಆಶುರಾ- ಎ- ಮೊಹರಂ ಹಬ್ಬವನ್ನು ಸರ್ವ ಧರ್ಮಿಯರು ಶಾಂತಿ ಸಹೋದರತೆ ಭಾವೈಕ್ಯತೆ ಶ್ರದ್ಧಾ ಭಕ್ತಿಯಿಂದ ಧಾರ್ಮಿಕವಾಗಿ ಆಚರಿಸುತ್ತಾರೆ .ಸತ್ಯ ನ್ಯಾಯ ಮತ್ತು ನೈತಿ ಕತೆಗಾಗಿ ಕರ್ಬಲಾದಲ್ಲಿ ತಮ್ಮ ಜೀವ ವನ್ನೇ ತ್ಯಾಗ ಮಾಡಿದ ಮೊಹಮ್ಮದ್ ಪೈಗಂಬರ "ಸೊ "ಅವರ ಮೊಮ್ಮಗ ಹಜರತ್ ಇಮಾಮ್ ಹುಸೈನ್ (ರ .ಅ) ಮತ್ತು ಅವರ ಒಡ ನಾಡಿಗಳಾದ ಹುತಾತ್ಮ ದಿನದ ಸ್ಮರಣಾರ್ಥ ಮುಹರ್ರಂ ಆಚರಿಸಲಾಗುತ್ತಿದೆ ಎಂದು ಖಾಜಿ ಸೈಯ್ಯದ್ ಅಬ್ದುಲ್ ರಜಾಕ್ ಖಾದ್ರಿ ಸಾಹೇಬ್ ನುಡಿದರು .ಸೌದಾಗರ್ ಸುನ್ನಿ ಜುಮ್ಮಾ ಮಸೀದಿಯಲ್ಲಿ ಅಧ್ಯಕ್ಷ ಹಾಜಿ ಹುಸೇನ್ ಭಾಷಾ ನೇತೃತ್ವದಲ್ಲಿ ಮೌಲಾನಾ ಹಾಜಿ ಎಸ್‌. ಅಬ್ದುಲ್ ಸಮದ್ ನಿಜಾಮಿ ಅವರು ಮಾತನಾಡಿ ಪೈಗಂಬರರ ಪ್ರಿಯಾ ಮೊಮ್ಮಗ ಹಜರತ್ ಇಮಾಮ್ ಹುಸೈನ್( ರ.ಅ)ಕರ್ಬಲಾ ಹುತಾತ್ಮರ ತ್ಯಾಗ ಮತ್ತು ಬಲಿದಾನ ವನ್ನು ಕುರಿತು ಉಪನ್ಯಾಸ ನೀಡುತ್ತಾ ಪೈಗಂಬರರ ತತ್ವ ಸಿದ್ಧಾಂತ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಪಾಲಿಸಬೇಕೆಂದರು. 

ಹಾಜಿ ಎ .ಅಬ್ದುಲ್ ನಬಿ ಅವರು ಸಲಾಮ್ ಓದಿದರು .ಖತೀಬ್ ಜಹೀರುದ್ದೀನ್ ಬಾಬು ,ಲತೀಫ್ ಬಾಯ್ ,ಮೊಹಮ್ಮದ್ ಅಜಮ್ ,ಹಾಜಿ ಎ .ಮುಹಮ್ಮದ್ ಇಬ್ರಾಹೀಂ ,ಎ. ಮೊಹಮ್ಮದ್ ರಫಿ, ಎ .ಮೊಹಮ್ಮದ್ ನೌಶಾದ್ ಅಲಿ, ಎ .ಮೊಹಮ್ಮದ್ ನಿಜಾಮುದ್ದೀನ್, ಎ. ಮುಹಮ್ಮದ್ ಹಾಜಿ, ಮೊಹಮ್ಮದ್ ಗೌಸ್, ದಾದಾ ಖಲಂದರ್ ಸಮುದಾಯದವರು ಉಪಸ್ಥಿತರಿದ್ದರು. ಸರ್ವರಿಗೂ ಪ್ರಸಾದ ವಿತರಿಸಲಾಯಿತು. 


ಸುದ್ದಿ ಓದಿ