ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು: ಗೋಪಿಚಂದ

ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು: ಗೋಪಿಚಂದ

ಬೆಳಗಾವಿ 26:  ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಂಜೀವಿನಿಯಾಗಿದ್ದು, ಅದನ್ನು ಪ್ರಾಥಮಿಕ ಹಂತದಲ್ಲಿಯೇ ಕಡ್ಡಾಯಗೊಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಭಾರತದ ಬ್ಯಾಡ್ಮಿಟನ್ ಮುಖ್ಯ ತರಬೇತುದಾರ, ರಾಜೀವಗಾಂಧಿ ಖೇಲರತ್ನ ಪುರಸ್ಕೃತ  ಪದ್ಮಭೂಷಣ ಪಿ. ಗೋಪಿಚಂದ ಹೇಳಿದರು. 

ಕೆಎಲ್ಇ ಸಂಸ್ಥೆಯ ಲಿಂಗರಾಜ ಸ್ವಾಯತ್ತ ಮಹಾವಿದ್ಯಾಲಯದ ಮನಃಶಾಸ್ತ್ರ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಸಹಯೋಗದಲ್ಲಿ 'ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಶಿಸ್ತು, ನವಮನ್ವಂತರದ ಯೋಗಕ್ಷೇಮಕ್ಕೆ ಅಗತ್ಯವಾಗಿದೆೆ' ಎಂಬ ವಿಷಯ ಕುರಿತು ದಿ.25ರಂದು ಆಯೋಜಿಸಲಾಗಿದ್ದ ಒಂದು ದಿನದ ಅಂತರಾಷ್ಟ್ರೀಯ ವೆಬಿನಾರ್ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವೆಬಿನಾರ್ನ್ನು ಉದ್ಘಾಟಿಸಿ ಮಾತನಾಡಿದ ಕೆಎಲ್ಇ ಸಂಸ್ಥೆಯ ಕಾಯರ್ಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಇಂದು ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ನಮ್ಮ ಬದುಕಿನ ಕ್ರಮವನ್ನೇ ಬದಲಾಯಿಸಿದೆ. ಇದರಿಂದ ಹೊರಗೆ ಬರುವುದು ಹೇಗೆ ಹಾಗೂ ಬದಲಾಗುವುದು ಹೇಗೆ ಎಂಬ ಯಕ್ಷಪ್ರಶ್ನೆ ಮೂಡುತ್ತಿರುವ ಸಂದರ್ಭದಲ್ಲಿ ನಮ್ಮ ದೈಹಿಕ ಮಾನಸಿಕ ಹಾಗೂ ಆಧ್ಯಾತ್ಮಿಕ ಶಕ್ತಿಗಳ ಮೂಲಕ ಅದನ್ನು ಸಮರ್ಥವಾಗಿ ನಿಯಂತ್ರಿಸಲು ಸಾಧ್ಯವೆಂಬುದು ನನ್ನ ಮನದಾಳದ ನುಡಿ. ನಮ್ಮ ಜೀವನ ಕ್ರಮದಲ್ಲಿ ಬದಲಾವಣೆಯಾಗಲೇಬೇಕು. ಇಂದು ಇಡೀ ಜಗತ್ತು ಈ ಸೋಂಕಿಗೆ ಲಸಿಕೆಯನ್ನು ಕಂಡುಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಸಂಶೋಧಕರು ಹಗಲಿರುಳು ಹೋರಾಡುತ್ತಿದ್ದಾರೆ. ಅದಕ್ಕೆ ಇನ್ನು ಹೆಚ್ಚಿನ ಸಮಯಾವಕಾಶಬೇಕು. ಅದು ದೊರೆಯುವವರೆಗೆ ನಾವೆಲ್ಲರೂ ಜಾಗೃತೆಯಿಂದ ಇರಬೇಕು. ಅದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ, ಮುಖಗವಸುಗಳನ್ನು ಧರಿಸುವ ಅಗತ್ಯತೆ ಇದೆ. ಇದು ಎಲ್ಲರ ಜವಾಬ್ದಾರಿಯೂ ಹೌದು. ಎಲ್ಲರೂ ಸಾಂಘಿಕವಾಗಿ ಹೋರಾಡುವ ಮನೋಭಾವವನ್ನು ಹೊಂದಿದಾಗ ಮಾತ್ರ ಈ ಸೋಂಕನ್ನು ನಿಮರ್ೂಲನೆಗೊಳಿಸಲು ಸಾಧ್ಯ. ಇಂದು ಆಯೋಜಿಸಿರುವ ವೆಬಿನಾರ್ ನಮ್ಮ ದೈಹಿಕ ಹಾಗೂ ಮಾನಸಿಕ ಜೀವನಕ್ಕೆ ಬಹುಮೌಲಿಕ ಸಂದೇಶವನ್ನು ಕಲ್ಪಿಸಿದೆ ಎಂದು ಹೇಳಿದರು.

ಈ ವೆಬಿನಾರ್ದಲ್ಲಿ ಐಎಫ್ಪಿಇಎಸ್ಎಸ್ಎ ಅಧ್ಯಕ್ಷ ಪ್ರೊ.ರಾಜೇಶ ಕುಮಾರ್, ಜನರಲ್ ಸೆಕ್ರೆಟರಿ ಪ್ರೊ.ಎಲ್.ಬಿ.ಲಕ್ಷ್ಮೀಕಾಂತ ರಾಥೋಡ ಪಾಲ್ಗೊಳ್ಳಲಿದ್ದು, ಡಾ.ಅಮಿತ್ ಮಲೀಕ್, ಮಲೇಶಿಯಾದ ಡಾ.ಯುಎಂ ಬೂನ್ ಹೂಯಿ, ಲಂಡನ್ದ ಡಾ.ಮೀನಾ ಬೋಬಡೆ, ಸೌದಿ ಅರೆಬಿಯಾದ ಸೈಯದ್ ಇಬ್ರಾಹಿಂ, ಡಾ.ಕೌಖಬ್ ಅಝೀಮ್, ಫಿಲಿಫೆನ್ಸ್ ಪ್ರೊ.ರೂಸಿತಾ ಹೆರನಾನಿ ಸಂಪನ್ಮೂಲವ್ಯಕ್ತಿಗಳಾಗಿ ಮಾತನಾಡಿದರು. ಪ್ರಾಚಾರ್ಯರಾದ ಡಾ.ಆರ್.ಎಂ.ಪಾಟೀಲ, ಕೆಎಲ್ಇ ಆಜೀವ ಸದಸ್ಯರಾದ ಡಾ.ಪ್ರಕಾಶ ಕಡಕೋಳ, ಸಂಯೋಜಕರಾದ ಪ್ರೊ.ಶ್ರೀಮತಿ ಎಂ.ಆರ್.ಬನಹಟ್ಟಿ, ದೈಹಿಕ ನಿದರ್ೇಶಕ ಡಾ. ಸಿ.ರಾಮರಾವ್, ಗಿರಿಜಾ ಹಿರೇಮಠ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಾವಿರಕ್ಕೂ ಹೆಚ್ಚು ಸಂಶೋಧಕರು, ಪ್ರಾಧ್ಯಾಪಕರು, ವಿದ್ಯಾಥರ್ಿಗಳು ವೆಬಿನಾರ್ದಲ್ಲಿ ಪಾಲ್ಗೊಂಡಿದ್ದರು.

 

ಸುದ್ದಿ ಓದಿ