ವೀರರ ಗೌರವಾರ್ಥ ಪ್ರೇರಣಾ ಸಂವಾದ
ನವದೆಹಲಿ, ಆಗಸ್ಟ್ ೬ ದೇಶದ ೭೫ನೇ ಸ್ವಾತಂತ್ರ್ಯ ವರ್ಷಾಚರಣೆಯ ಅಂಗವಾಗಿ, ದೇಶ ಸೇವೆಯಲ್ಲಿ ಅತ್ಯುತ್ತಮ ತ್ಯಾಗ ಮೆರೆದ ಧೈರ್ಯಶಾಲಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲು, ಸಶಸ್ತ್ರ ಪಡೆಗಳು, ಗಡಿ ರಸ್ತೆಗಳ ಸಂಘಟನೆ, ಮತ್ತು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಗಳ ಸಹಯೋಗದೊಂದಿಗೆ ದೇಶದ ೭೫ ನಗರಗಳಲ್ಲಿ ಕಾರ್ಯಕ್ರಮವೊಂದನ್ನು ಶೌರ್ಯ ಪ್ರಶಸ್ತಿ ಪೋರ್ಟಲ್ ಆಯೋಜಿಸಿದೆ. ಈ ಉಪಕ್ರಮದ ಅಡಿಯಲ್ಲಿ, ವೀರರ ಗೌರವಾರ್ಥವಾಗಿ ಪ್ರೇರಣಾ ಸಂವಾದಗಳು ಮತ್ತು ಅಭಿನಂದನಾ ಸಮಾರಂಭಗಳನ್ನು ಆಯೋಜಿಸಲಾಗುತ್ತಿದೆ.
ನಾಗರಿಕರಲ್ಲಿ ಅದರಲ್ಲೂ ವಿಶೇಷವಾಗಿ ಯುವಜನತೆಯಲ್ಲಿ ದೇಶ ಭಕ್ತಿ ಮತ್ತು ದೇಶಪ್ರೇಮವನ್ನು ತುಂಬುವ ದೃಷ್ಟಿಕೋನದೊಂದಿಗೆ ವೀರರು ಮತ್ತು ಅವರ ಕುಟುಂಬದವರ ಧೈರ್ಯ, ಗುಣ ಮತ್ತು ಬದ್ಧತೆಯನ್ನು ಗೌರವಿಸಲು ದೇಶಾದ್ಯಂತ ೭೫ ನಗರಗಳನ್ನು ಆಯ್ಕೆ ಮಾಡಲಾಗಿದೆ. ಸ್ವಾತಂತ್ರ್ಯಾ ನಂತರ ಸಶಸ್ತ್ರ ಪಡೆಗಳ ಶೌರ್ಯದ ಆಚರಣೆಯೂ ಇದಾಗಿರಲಿದೆ.
ಇಂದಿನಿಂದ ಈ ತಿಂಗಳ ೧೪ ರವರೆಗೆ ದೇಶಾದ್ಯಂತ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಆಚರಣೆಗಳು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುವಂತೆ ಗ್ಯಾಲಂಟರಿ ಅವಾರ್ಡ್ಸ್ ಪೋರ್ಟಲ್ - -.in www.gallantryawards.gov ಕಾರ್ಯಕ್ರಮಗಳನ್ನು ನೇರವಾಗಿ ವೆಬ್ ಕಾಸ್ಟ್ ಮಾಡಲಿದೆ. ಕಾರ್ಯಕ್ರಮಗಳ ರೆಕಾರ್ಡಿಂಗ್ ಕೂಡಾ ಪೋರ್ಟಲ್ ನ ಯೂಟ್ಯೂಬ್ ಛಾನೆಲ್ ನಲ್ಲಿ ಲಭ್ಯವಿರುತ್ತದೆ.