ತಾಯಿ ಆದಿಶಕ್ತಿಯ ಪ್ರತಿರೂಪ: ಸುವರ್ಣ ಆಸಂಗಿ.
ಮಹಾಲಿಂಗಪುರ: ಈ ಜಗತ್ತಿನಲ್ಲಿ ಅತ್ಯಂತ ಪೂಜ್ಯ ಮತ್ತು ಪವಿತ್ರ ಸ್ಥಾನ ತಾಯಿ ಸ್ಥಾನ. ಪ್ರತಿ ತಾಯಿಯೂ ತನ್ನ ಮಗುವಿಗಾಗಿ ಮಾಡುವ ತ್ಯಾಗ ಮತ್ತು ಪರಿಶ್ರಮಕ್ಕೆ ಸಾಟಿ ಇಲ್ಲ, ಹಾಗಾಗಿ ಸರ್ವರೂ ತಾಯಂದಿರನ್ನು ಪ್ರೀತಿ, ಅಭಿಮಾನ, ಗೌರವದಿಂದ ಕಂಡರೆ ಈ ಆಚರಣೆವಾಗುತ್ತದೆ ಎಂದು ಸುವರ್ಣ ಆಸಂಗಿ ಹೇಳಿದರು.
ಸ್ಥಳೀಯ ಶಾಂತಿನಿಕೇತನ ಬಡಾವಣೆಯ ಮಹೇಶ ಬಡಿಗೇರವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾರ್ಥವಿಲ್ಲದೆ ದುಡಿಯುವ ಏಕೈಕ ಜೀವ ತಾಯಿ. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದೇ ಹೊರತಾಗಿ ಕೆಟ್ಟ ತಾಯಿ ಎಂದಿಗೂ ಇರಲಾರಳು, ತಾಯಿ ವ್ಯಕ್ತಿಯಲ್ಲ ಸರ್ವಶಕ್ತಿ, ಆದಿಶಕ್ತಿಯ ಪ್ರತಿರೂಪ ತಾಯಿಯ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ, ಅಂಥ ತಾಯಿಯನ್ನು ಪೂಜಿಸುವ, ಗೌರವಿಸುವ ಸಂಸ್ಕಾರ ಮಕ್ಕಳಲ್ಲಿ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಹಿರಿಯ ಜೀವಿಗಳಾದ ಭಾನುಬಾಯಿ ಬಾಬುರಾವ್ ಬಡಿಗೇರ ಮತ್ತು ಬೋರವ್ವ ಬಡಿಗೇರ ಇವರನ್ನು ಸನ್ಮಾನಿಸಿ ಗೌರವಿಸಿ ನೆರೆದಿದ್ದ ಮಹಿಳೆಯರು ಅವರ ಪಾದಗಳಿಗೆ ನಮಸ್ಕರಿಸಿ ಆಶೀವರ್ಾದ ಪಡೆದದ್ದು ಅರ್ಥಪೂರ್ಣವಾಗಿತ್ತು.
ಮೀನಾಕ್ಷಿ ಹಿರೇಮಠ, ಮಹಾನಂದ ಮಠಪತಿ, ಸುನಿತಾ ಬಡಿಗೇರ, ಲತಾ ಬಡಿಗೇರ, ಸೋಮು ಬಡಿಗೇರ, ಮಹಾನಂದ ಘಟಪನದಿ, ಪವಿತ್ರ ಬಾವಿಕಟ್ಟಿ, ಶಿವಗಂಗೆ, ನಿಂಬರಗಿ, ಸುವರ್ಣ ನಾಡಗೌಡ, ಮಹಾದೇವಿ ನಾಗರಾಳ, ಭಾಗವ್ವ ಅಂಬಿ, ಶೇಖವ್ವ ಉದಗಟ್ಟಿ, ಶಂಕ್ರವ ಅಂಬಿ, ಸುನಂದ ಜಿಗೇರಿ, ಲಕ್ಷ್ಮಿ ಬಡಿಗೇರ, ತೇಜಸ್ವಿನಿ ಪೋತದಾರ, ಸುಮಾ ಇತರರಿದ್ದರು