ನದಿ ನೀರಲ್ಲಿ ಮುಳಗಿ ತಾಯಿ, ಮಗ ಸಾವು: ತಾಯಿ ಶವ ಹೊರಕ್ಕೆ, ಮಗನಿಗಾಗಿ ತೀವ್ರ ಹುಡುಕಾಟ
ಸಂಕೇಶ್ವರ : ಪಟ್ಟಣದ ಹೊರ ವಲಯದಲ್ಲಿ ಇರುವ ಹಿರಣ್ಯಕೇಶಿ ನದಿ ನೀರಲ್ಲಿ ಮುಳಗಿ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ವರದೆ.
ಈ ಘಟನೆಯಲ್ಲಿ ಮೃತಪಟ್ಟವರನ್ನು ಸಂಕೇಶ್ವರ ಪಟ್ಟಣದ ಹನುಮಾನ ನಗರ ಕುಟೋಳಿ ಕುಟುಂಬದವರೆಂದು ತಿಳಿದು ಬಂದಿದೆ. ಆದರೆ ಯಾವ ಕಾರದಿಂದ ಇವರು ನೀರಲ್ಲಿ ಮುಳಗಿ ಮೃತಪಟ್ಟಿದ್ದಾರೆ ಎನ್ನುವದು ತಿಳಿದು ಬಂದಿಲ್ಲ. ಮೃತರ ಹೆಸರುಗಳು ತಿಳಿದು ಇನ್ನು ತಿಳಿದು ಬರಬೇಕಿದೆ.
ಮಂಗಳವಾರ ರಾತ್ರಿ ಸಂಕೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತಾಯಿಯ ಶವವನ್ನು ನದಿ ನೀರಿನಿಂದ ಮೇಲಕ್ಕೆ ತೆಗೆದಿದ್ದಾರೆ. ಆದರೆ ಮಗನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.