ಅಂತರರಾಷ್ಟ್ರೀಯ

ಮೊಲ್ಡೊವನ್ ಶಿಕ್ಷಣ ಸಚಿವರಿಗೂ ಅಮರಿಕೊಂಡ ಕೊರೋನ ಸೋಂಕು

ಮೊಲ್ಡೊವನ್ ಶಿಕ್ಷಣ ಸಚಿವರಿಗೂ ಅಮರಿಕೊಂಡ ಕೊರೋನ ಸೋಂಕು

ಚಿಸಿನೌ, ಡಿಸೆಂಬರ್ 1: ಮೊಲ್ಡೊವನ್ ಶಿಕ್ಷಣ ಸಚಿವ ಇಗೊರ್ ಶರೋವ್ ಅವರು ಕೊರೋನ ಸೋಂಕಿಗೆ   ತುತ್ತಾಗಿದ್ದಾರೆ.

ಆದರೂ ಅವರು  ಶೀಘ್ರ ಗಣಮುಖರಾಗಿ ಮರಳಿ ಕೆಲಸಕ್ಕೆ ಬರುವ ವಿಶ್ವಾಸ  ವ್ಯಕ್ತಪಡಿದ್ದಾರೆ.

ಈ ನಡುವೆ ದೇಶದಲ್ಲಿ  107,364 ಕರೋನ ಸೋಂಕು ಪ್ರಕರಣಗಳು ದಾಖಲಿಸಲಾಗಿದೆ ಎಂದು    ಮೊಲ್ಡೊವನ್ ಅಧಿಕಾರಿಗಳು  ಹೇಳಿದ್ದಾರೆ. ಈವರೆಗೆ 2,304 ಸಾವುಗಳು ಸಂಭವಿಸಿವೆ.

ನಾನು ಸದ್ಯ ಕೊರೋನ ಸೋಂಕಿನ ವಿರುದ್ಧ  ಹೋರಾಡುತ್ತಿದ್ದೇನೆ, ಕೊರೋನ ವಾರಿಯರ್ ಗಳ  ವೃತ್ತಿಪರತೆಗೆ,  ಸೇವಾ ಮನೋಭಾವಕ್ಕೆ ಧನ್ಯವಾದಗಳು.   ವೈದ್ಯರ ಮೂಲಕ ಚಿಕಿತ್ಸೆಯನ್ನು ಪಡೆದು  ಮತ್ತು ಶೀಘ್ರದಲ್ಲೇ  ಕರ್ತವ್ಯಕ್ಕೆ ಮರಳುವ ಭರವಸೆಯಿದೆ   ಎಂದು ಶರೋವ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. 

ಸುದ್ದಿ ಓದಿ